ಸುಬ್ರಹ್ಮಣ್ಯ ಎ.27: ಬೆಂಗಳೂರು ಮೂಲದ ಯುವಕರು ಪ್ರಯಾಣಿಸುತಿದ್ದ ಕಾರು ಸುಬ್ರಹ್ಮಣ್ಯ ಸಮೀಪದ ಅರಂಪಾಡಿ ಬಳಿ ತಿರುವಿನಲ್ಲಿ ಬೈಕ್ ಗೆ ಗುದ್ದಿ ಪರಾರಿಯಾಗಲು ಯತ್ನಿಸಿದ ಮತ್ತು ಪರಾರಿಯಾಗುತಿದ್ದ ಕಾರನ್ನು ಸ್ಥಳಿಯರು ಬೆನ್ನಟ್ಟಿ ಹಿಡಿದು ಸುಬ್ರಹ್ಮಣ್ಯ ಪೊಲೀಸರಿಗೊಪ್ಪಿಸಿದ ಘಟನೆ ಶನಿವಾರ ಸಂಜೆ ನಡೆದಿದೆ.
ಬೆಂಗಳೂರು ಮೂಲದ ಯುವಕರಿದ್ದ ಕಾರು ಮಂಜೇಶ್ವರ-ಸುಬ್ರಹ್ಮಣ್ಯ ಮಾರ್ಗವಾಗಿ ಬೆಂಗಳೂರು ಕಡೆಗೆ ತೆರಳುತಿತ್ತು. ಅರಂಪಾಡಿ ಬಳಿ ತಲುಪಿದಾಗ ಎದುರಿನಿಂದ . ಬೈಕ್ ನಲ್ಲಿ ತೆರಳುತಿದ್ದ ಯೇನೆಕಲ್ಲು ನಿವಾಸಿ ರಾಮಚಂದ್ರ ಮಾದನ ಮನೆ ಎಂಬವರ ಬೈಕಿಗೆ ಕಾರು ಡಿಕ್ಕಿ ಹೊಡೆದಿದೆ.ಈ ವೇಳೆ ಬೈಕು ಸವಾರರು ರಸ್ತೆಗೆ ಎಸೆಯಲ್ಪಟ್ಟು ಗಂಭೀರ ಗಾಯಗೊಳಗಾದರು.ಈ ಹೊತ್ತು ಅಪಘಾತ ನಡೆಸಿದ ಕಾರಿನವರು ನಿಲ್ಲಿಸದೆ ಪರಾರಿಯಾಗಲು ಯತ್ನಿಸಿದರು.
ಇದೇ ಮಾರ್ಗದಲ್ಲಿ ತೆರಳುತಿದ್ದ ಯುವಕರು ಸ್ಥಳಿಯರಿಗೆ ಮಾಹಿತಿ ನೀಡಿದ್ದು ಸ್ಥಳಿಯ ಯುವಕರು ವಾಹನಗಳಲ್ಲಿ ಕಾರನ್ನು ಬೆನ್ನಟ್ಟಿದ್ದು ಕುಲ್ಕುಂದ ಬಳಿ ಕಾರು ಅಡ್ಡಗಟ್ಟಿ ತಡೆದು ನಿಲ್ಲಿಸಿ ಕರೆತಂದು ಸುಬ್ರಹ್ಮಣ್ಯ ಪೊಲೀಸರಿಗೆ ಒಪ್ಪಿಸಿದರು. ಬೈಕು ಸವಾರ ಗಾಯಳುವನ್ನು ಸುಬ್ರಹ್ಮಣ್ಯ ಪ್ರಾರ್ಥಮಿಕ ಅರೋಗ್ಯ ಕೇಂದ್ರಕ್ಕೆ ಸ್ಥಳೀಯರು ಧಾಖಲಿಸಿ ಪ್ರಾರ್ಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಹೆಚ್ಚಿನ ಚಿಕಿತ್ಸೆಗೆ ಪುತ್ತೂರು ಖಾಸಗಿ ಆಸ್ಪತ್ರೆಗೆ 108 ಅಂಬುಲೆನ್ಸ್ ನಲ್ಲಿ ಕರೆದೊಯ್ಯಲಾಗಿದೆ.
ಘಟನೆ ಸಂಬಂಧ ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದರು. ಪೊಲೀಸರಯ ಪ್ರಕರಣ ಕುರಿತಂತೆ ತನಿಖೆ ನಡೆಸುತ್ತಿದ್ದಾರೆ.