Recent Posts

Sunday, January 19, 2025
ಸುದ್ದಿ

‘ ತಾಯಿ ಭಾರತಿ ‘ ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದಪದ್ಮ ಸರಣಿ – 33

ತಾಯೆ ಬಾರೆ ಮೊಗವ ತೋರೆ ಭವ್ಯ ಭಾರತಿ|
ಇಡಿಯ ಜಗಕೆ ವಿಶ್ವ ಗುರುವು ದಿವ್ಯ ಸಂಸ್ಕೃತಿ||
ಜಾತಿ ಮತದ ಭೇಧಭಾವ ಇರದ ಮಾತೆಯೆ|
ಮಕ್ಕಳೆಲ್ಲ ಸರಿಸಮಾನ ಅದೆಂಥ ಮಮತೆಯೆ||

ಜಾಹೀರಾತು
ಜಾಹೀರಾತು
ಜಾಹೀರಾತು

ಸಪ್ತಸಾಗರದೊಡತಿ ನೀನು ಸುಪ್ತ ಜಗದೊಳು|
ಸಪ್ತಮಾತೃಕೆಯಂತೆ ಇಹರು ಗುಪ್ತಗಾಮಿನಿಯರು||
ಅಂಗವಂಗ ನಂದ ಕದಂಬ ಚಾಲುಕ್ಯರಧಿಪತಿ|
ಸೂರ್ಯವಂಶ ಚಂದ್ರ ವಂಶಕೆ ಕಲಶಕೀರುತಿ||

ಜಾಹೀರಾತು
ಜಾಹೀರಾತು
ಜಾಹೀರಾತು

ಕಂಗು ತೆಂಗು ತಾಳೆ ಬಾಳೆ ಮರುಗ ಮಲ್ಲಗೆ|
ಅತ್ತಿ ಇತ್ತಿ ಬಿಲ್ಪ ಪತ್ರೆ ಕೃಷ್ಣ ತುಳಸಿ ಸಂಪಿಗೆ||
ತಿಳಿಗೊಳದಾ ಪಾತ್ರೆ ನಡುವೆ ತುಂಬಿ ತುಳುಕಿ ನೈದಿಲೆ|
ಬಳುಕು ಬಳ್ಳಿಯಂತ ಕುವರಿ ನೀನು ಕೋಮಲೆ||

ನಾಗನನ್ನು ದೇವರೆಂದ ಸತ್ಯಧರ್ಮ ನೀತಿಯು|
ಕುವರಿಯನ್ನು ದೇವಿಯೆಂದ ಜಗದ ಒಡತಿಯು||
ಧರ್ಮದಲ್ಲಿ ತೂಗುತಿಹೆ ನೀ ಜಗದ ತೊಟ್ಟಿಲು|
ಮುಷ್ಠಿ ಅನ್ನ ಉಣ್ಣುವಂತ ಹೊನ್ನ ಬಟ್ಟಲು||

ಸಾಹಿತಿಗಳ ಒಡಲೊಳಿಟ್ಟ ಕಾವ್ಯಕನ್ನಿಕೆ|
ನಾಟ್ಯರಾಣಿ ಶಾಂತಲೆಯ ಚೈತ್ರ ಚಂದ್ರಿಕೆ||
ಮೂಗನಾದ ಕಾಳಿದಾಸಗೆ ಸಂಗೀತ ಕಲಿಸಿದೆ|
ಆ ಕುಮಾರ ವ್ಯಾಸನಿಂದ ಕಾವ್ಯ ಬರೆಸಿದೆ||

Leave a Response