Friday, November 22, 2024
ಕ್ರೀಡೆಸುದ್ದಿ

ಹಾರ್ದಿಕ್ ವೀರಾವೇಶ ವ್ಯರ್ಥ, ಕೆಕೆಆರ್‌ಗೆ 34ರನ್ ಜಯ ಐಪಿಎಲ್: ಹಾರ್ದಿಕ್ ವೀರಾವೇಶ ವ್ಯರ್ಥ, ಕೆಕೆಆರ್‌ಗೆ 34ರನ್ ಜಯ – ಕಹಳೆ ನ್ಯೂಸ್

ರನ್ ಸುರಿಮಳೆಗೆ ಸಾಕ್ಷಿಯಾದ ಈಡನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಕೋಲ್ಕೊತಾ ನೈಟ್ ರೈಡರ್ಸ್ ತಂಡ ಮುಂಬೈ ಇಂಡಿಯನ್ಸ್ ವಿರುದ್ಧ 34ರನ್‌ಗಳ ಭರ್ಜರಿ ಜಯ ದಾಖಲಿಸಿತು ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಆತಿಥೇಯ ನೈಟ್ ರೈಡರ್ಸ್ 20 ಓವರ್‌ಗಳಲ್ಲಿ 2 ವಿಕೆಟ್‌ಗೆ 232 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ 20 ಓವರ್‌ಗಳಲ್ಲಿ ೭ ವಿಕೆಟ್‌ಗೆ 198 ರನ್‌ಗಳನ್ನು ಗಳಿಸಿ ಸೋಲೊಪ್ಪಿಕೊಂಡಿತು.

ಸತತ 6 ಸೋಲಿನ ಬಳಿಕ ಮೊದಲ ಪಂದ್ಯ ಗೆದ್ದ ಕೆಕೆಆರ್ ತಂಡ ಅಂಕಪಟ್ಟಿಯಲ್ಲಿ 5 ನೇ ಸ್ಥಾನಕ್ಕೆ ಏರುವಲ್ಲಿ ಯಶಸ್ವಿಯಾಗಿದ್ದು ಪ್ಲೇ ಆಫ್ಸ್ ಆಸೆಯನ್ನು ಉಳಿಸಿಕೊಂಡಿದೆ. ಇಂಡಿಯನ್ಸ್ ಪರ ವೀರಾವೇಶದ ಬ್ಯಾಟಿಂಗ್ ಪ್ರದಶರ್ಶಿಸಿದ ಹಾರ್ದಿಕ್ ಪಾಂಡ್ಯ, 34 ಎಸೆತಗಳಲ್ಲಿ 6 ಫೋರ್ ಮತ್ತು ಬರೋಬ್ಬರಿ 9 ಭರ್ಜರಿಯ ಸಿಕ್ಸರ್‌ಗಳನ್ನು ಒಳಗೊಂಡ 91 ರನ್‌ಗಳನ್ನು ಸಿಡಿಸಿ ನೈಟ್ ರೈಡರ್ಸ್ ಬೌಲರ್‌ಗಳಿಗೆ ಸಿಂಹ ಸ್ವಪ್ನವಾದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇದಕ್ಕೂ ಮೊದಲು ರೈಡರ್ಸ್ ಪರ ಆರಂಭಿಕ ಬ್ಯಾಟ್ಸ್ಮನ್‌ಗಳಾದ ಶುಭಮನ್ ಗಿಲ್ (76) ಮತ್ತು ಕ್ರಿಸ್ ಲಿನ್ (54) ಸ್ಫೋಟಕ ಅರ್ಧಶತಕಗಳ ಮೂಲಕ ತಂಡದ ಬೃಹತ್ ಮೊತ್ತಕ್ಕೆ ಬೇಕಾದ ಭದ್ರ ಬುನಾದಿ ಹಾಕಿಕೊಟ್ಟರು. ಇನಿಂಗ್ಸ್ ಅಂತ್ಯದಲ್ಲಿ ಚೆಂಡನ್ನು ಕ್ರೀಡಾಂಗಣದ ಮೂಲೆ ಮೂಲೆ ಸೇರಿಸಿದ ಆಂಡ್ರೆ ರಸೆಲ್, 40 ಎಸೆತಗಳಲ್ಲಿ 6 ಫೋರ್ ಮತ್ತು 8 ಸಿಕ್ಸರ್ ಸಹಿತ 80 ರನ್‌ಗಳನ್ನು ಸಿಡಿಸಿ ಔಟಾಗದೆ ಉಳಿದರು. ಇದರೊಂದಿಗೆ ರೈಡರ್ಸ್ ಪಡೆ 200 ರ ಗಡಿ ದಾಟಿತು. 29 ಕೋಲ್ಕೊತಾ ನೈಟ್ ರೈಡರ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ಭಾನುವಾರ ನಡೆದ ಪಂದ್ಯದಲ್ಲಿ ದಾಖಲಾದ ಒಟ್ಟು ಸಿಕ್ಸರ್‌ಗಳು.

ಜಾಹೀರಾತು
ಜಾಹೀರಾತು
ಜಾಹೀರಾತು

17 ಮುಂಬಯಿ ಇಂಡಿಯನ್ಸ್ ತಂಡದ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಐಪಿಎಲ್ 2019 ರ ಅತ್ಯಂತ ವೇಗದ ಅರ್ಧಶತಕ ಸಿಡಿಸಿದ್ದಾರೆ. ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಕೇವಲ 17 ಎಸೆತಗಳಲ್ಲಿಈ ದಾಖಲೆ ಬರೆದರು. 150 ಇಂಡಿಯನ್ಸ್ ಎದುರು ಭಾನುವಾರದ ಪಂದ್ಯದಲ್ಲಿ 4 ಓವರ್‌ಗಳಲ್ಲಿ 57 ರನ್‌ಗಳನ್ನು ಬಿಟ್ಟುಕೊಟ್ಟು ದುಬಾರಿ ಬೌಲರ್ ಎನಿಸಿದ ರೈಡರ್ಸ್ ತಂಡದ ಲೆಗ್ ಸ್ಪಿನ್ನರ್ ಪಿಯೂಶ್ ಚಾವ್ಲಾ, ಕೃಣಾಲ್ ಪಾಂಡ್ಯ ಅವರ ವಿಕೆಟ್ ಪಡೆಯುವ ಮೂಲಕ ಐಪಿಎಲ್‌ನಲ್ಲಿ 150 ವಿಕೆಟ್‌ಗಳನ್ನು ಪಡೆದ 3 ನೇ ಬೌಲರ್ ಎನಿಸಿದರು. ಇದಕ್ಕೂ ಮುನ್ನ ಲಸಿತ್ ಮಾಲಿಂಗ (166) ಮತ್ತು ಅಮಿತ್ ಮಿಶ್ರಾ (152) ಈ ಸಾಧನೆ ಮಾಡಿದ್ದಾರೆ.

100 ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಕೆಕೆಆರ್ ತಂಡ ನೂರು ಪಂದ್ಯಗಳನ್ನು ಗೆದ್ದ ಸಾಧನೆ ಮಾಡಿದೆ. ಮುಂಬಯಿ ವಿರುದ್ಧದ ನಿನ್ನೆ ದೊರೆತ 34 ರನ್ ಗೆಲುವು ಕೆಕೆಆರ್‌ಗೆ ಸಿಕ್ಕ 100 ನೇ ಜಯ. ಕೋಲ್ಕೊತಾ ಪ್ಲೇಯಿಂಗ್ 11 ಕ್ರಿಸ್ ಲಿನ್, ಸುನಿಲ್ ನರೈನ್, ರಾಬಿನ್ ಉತ್ತಪ್ಪ, ಶುಭಮನ್ ಗಿಲ್, ನಿತೀಶ್ ರಾಣಾ, ದಿನೇಶ್ ಕಾರ್ತಿಕ್, ರಿಂಕು ಸಿಂಗ್, ಆಂಡ್ರೆ ರಸೆಲ್, ಪಿಯೂಶ್ ಚಾವ್ಲಾ, ಗ್ಯಾರಿ ಗರ್ನಿ, ಸಂದೀಪ್ ವಾರಿಯರ್. ಮುಂಬೈ ಪ್ಲೇಯಿಂಗ್ 11 ರೋಹಿತ್ ಶರ್ಮಾ, ಕ್ವಿಂಟನ್ ಡಿ’ಕಾಕ್, ಎವಿನ್ ಲೂಯಿಸ್, ಸೂರ್ಯಕುಮಾರ್ ಯಾದವ್, ಕೈರೋನ್ ಪೊಲಾರ್ಡ್, ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ, ರಾಹುಲ್ ಚಹರ್, ಲಸಿತ್ ಮಾಲಿಂಗ, ಜಸ್‌ಪ್ರೀತ್ ಬುಮ್ರಾ, ಬರಿಂದರ್ ಸ್ರನ್.