ಸಾರ್ವಜನಿಕ ಸ್ಧಳಗಳಲ್ಲಿ ಪಾನ್ ಮಸಾಲಾ ಜಗಿದು, ಉಗುಳುವ ಖಯಾಳಿ ಎಲ್ಲರಿಗೂ ಮೈಗೊಡ್ಡಿಕೊಂಡುಬಿಟ್ಟಿದೆ. ಇದೀಗ ಪಾನ್ ಮಸಾಲಾ ಜಗಿದು, ಉಗುಳುವ ವ್ಯಕ್ತಿಯೊಬ್ಬನಿಗೆ ನೂರು ರೂಪಾಯಿ ದಂಡ ವಿಧಿಸಲಾಗಿದೆ.
ಅಹಮದಾಬಾದ್ ನಗರ ಪಾಲಿಕೆ ಈ ದಂಡ ವಿಧಿಸಿದ್ದು, ಇದು ಭಾರತದಲ್ಲಿ ದಾಖಲಾದ ಮೊದಲ ಪ್ರಕರಣ ಅಂಥ ಹೇಳಿಕೊಂಡಿದೆ. ದಂಡ ತೆತ್ತವರು ಮಹೇಶ್ ಕುಮಾರ್ ಎಂಬುವರಾಗಿದ್ದು, ಪೂರ್ವ ಅಹಮದಾಬಾದ್ ನಿವಾಸಿಯಾಗಿದ್ದಾನೆ.
ಸರ್ದಾರ್ ಪಟೇಲ್ ಪ್ರತಿಮೆ ರಸ್ತೆಯ ಬಳಿ ಈತ ಉಗುಳುತ್ತಿರುವುದು ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಹಾಗಾಗಿ ದಂಡ ಪಾವತಿಸುವಂತೆ ನಗರ ಪಾಲಿಕೆ ಮಹೇಶ್ ಕುಮಾರ್ ಗೆ ಇ- ಮೆಮೋ ಕಳುಹಿಸಿದೆ.
ಎಲ್ಲೆಂದರಲ್ಲಿ ಪಾನ್ ಮಸಾಲಾ ಜಗಿದು, ಉಗುಳುವ ಜನರಿಗೆ ದಂಡ ವಿಧಿಸುವ ಪ್ರಕರಣ ಜಾರಿಯಾದರೆ ಜನತೆ ಎಚ್ಚೆತ್ತುಕೊಂಡು ಸ್ವಚ್ಚತೆ ಕಡೆಗೆ ಗಮನಕೊಡುವಂತಾದಿತು.