Tuesday, January 21, 2025
ಸುದ್ದಿ

ಶ್ರೀಲಂಕಾದಲ್ಲಿ ಮುಖ ಮುಚ್ಚಿಕೊಂಡು ಓಡಾಡುದನ್ನು ನಿಷೇಧಿಸಿದ ಸರ್ಕಾರ – ಕಹಳೆ ನ್ಯೂಸ್

ಇಂದಿನಿಂದ ಶ್ರೀಲಂಕಾದಲ್ಲಿ ಮುಖ ಮುಚ್ಚಿಕೊಂಡು ಓಡಾಡುವುದನ್ನು ನಿಷೇಧಿಸಲಾಗಿದೆ. ಶ್ರೀಲಂಕಾದಲ್ಲಿ ಮುಸ್ಲಿಮ್ ಮಹಿಳೆಯರು ಸಹಿತ ಪ್ರತಿಯೊಬ್ಬರು ಸಾರ್ವಜನಿಕ ಸ್ಥಳಗಳಲ್ಲಿ ಗುರುತು ಹಿಡಿಯಲು ಸಾಧ್ಯವಾಗದಂತೆ ಮುಖ ಮುಚ್ಚಿಕೊಂಡು ಓಡಾಡುವುದಕ್ಕೆ ನಿಷೇಧ ಹೇರಲಾಗಿದೆ. ನಿಷೇಧ ಸೋಮವಾರದಿಂದಲೇ ಜಾರಿಗೆ ಬರಲಿದೆ ಎಂದು ಶ್ರೀಲಂಕಾದ ಅಧ್ಯಕ್ಷ ಮೈತ್ರಿಪಾಲ ಸಿರಿಸೇನೆ ಹೇಳಿದ್ದಾರೆ.

”ರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ನಿಷೇಧ ಹೇರಲಾಗಿದೆ. ಯಾರೂ ಕೂಡ ಗುರುತು ಹಿಡಿಯಲು ಕಷ್ಟವಾಗುವಂತೆ ಮುಖ ಮರೆಸಿಕೊಂಡಿರಬಾರದು” ಎಂದು ಸಿರಿಸೇನ ಕಚೇರಿ ಮೂಲಗಳು ತಿಳಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

‘ಈಸ್ಟರ್ ಸಂಡೇ’ಯಂದು ಶ್ರೀಲಂಕಾದಲ್ಲಿ ನಡೆದ ಸರಣಿ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ ನೂರಾರು ಜನರು ಸಾವನ್ನಪ್ಪಿದ್ದರು. ಸ್ಥಳೀಯ ಮುಸ್ಲಿಂ ಮುಖಂಡರು ಮಹಿಳೆಯರಿಗೆ ಮುಖಕ್ಕೆ ಬಟ್ಟೆ ಮುಚ್ಚಿಕೊಳ್ಳದಂತೆ ಸೂಚಿಸಿದೆ. ಕೆಲವು ಮುಸ್ಲಿಂ ಸಂಘಟನೆಗಳು ಈ ಕುರಿತಂತೆ ಸರಕಾರಕ್ಕೆ ತನ್ನ ಬೆಂಬಲ ವ್ಯಕ್ತಪಡಿಸಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು