Recent Posts

Tuesday, January 21, 2025
ಸುದ್ದಿ

ಸಂತ ಅಂತೋನಿಯವರ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಸೆಬಾಸ್ಟಿನ್ ಕೆ.ಎಸ್ ಹೃದಯಾಘಾತದಿಂದ ಸಾವು – ಕಹಳೆ ನ್ಯೂಸ್

ಶಿರಾಡಿ ಗ್ರಾಮದ ಉದನೆ ಸಂತ ಅಂತೋನಿಯವರ ಪ್ರೌಢಶಾಲೆಯ ನಿವೃತ್ತ ಮುಖ್ಯ ಶಿಕ್ಷಕ ಸೆಬಾಸ್ಟಿನ್ ಕೆ.ಎಸ್‍ರವರು ಹೃದಯಾಘಾತಕ್ಕೆ ಬಳಗಾಗಿ ನಿಧನರಾದ ಘಟನೆ ನಡೆದಿದೆ. ಸೆಬಾಸ್ಟಿನ್ ಅರಸಿನಮಕ್ಕಿ ಚರ್ಚ್‍ವೊಂದರಲ್ಲಿ ನಡೆಯುತ್ತಿದ್ದ ತಮ್ಮ ಸಂಬಂಧಿಕರೋರ್ವರ ಅಂತ್ಯಕ್ರಿಯೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು ಈ ವೇಲೆ ಎದೆನೋವು ಕಾಣಿಸಿಕೊಂಡಿತ್ತು. ತಕ್ಷಣ ಉಜಿರೆಯ ಆಸ್ಪತ್ರೆಯೊಂದಕ್ಕೆ ಕರೆದೊಯ್ಯಲಾಯಿತು. ಆದರೆ ದುರದೃಷ್ಟವಶಾತ್ ದಾರಿ ಮದ್ಯೆಯೇ ಹಸುನೀಗಿದ್ದರು.

1985ರಲ್ಲಿ ಉದನೆ ಸಂತ ಅಂತೋನಿಯವರ ಪ್ರೌಢಶಾಲೆಗೆ ಸಹಶಿಕ್ಷಕರಾಗಿ ಸೇರ್ಪಡೆಗೊಂಡಿದ್ದರು. 2012ರ ನವೆಂಬರ್‌ನಲ್ಲಿ ಮುಖ್ಯಶಿಕ್ಷಕರಾಗಿ ಭಡ್ತಿಕೊಂಡಿದ್ದರು. ಸುಮಾರು 33 ವರ್ಷ 1 ತಿಂಗಳುಗಳ ಕಾಲ ಸಹಶಿಕ್ಷಕರಾಗಿ , ಮುಖ್ಯ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ 31-7-218ರಂದು ನಿವೃತ್ತರಾಗಿದ್ದರು. ಕರ್ತವ್ಯದ ವೇಳೆ ಉದನೆ ಸಂತ ಅಂತೋನಿಯವರ ಪ್ರೌಢಶಾಲೆಯ ಅಭಿವೃದ್ಧಿಗಾಗಿ ಅಪಾರ ಶ್ರಮವಹಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಮೃತರು ಪತ್ನಿ ಲೂಸಿ ಸೆಬಾಸ್ಟಿನ್, ಪುತ್ರ ಅನೂಪ್ ಕೆ.ಎಸ್, ಪುತ್ರಿಯರಾದ ಅನೂಷ ಪ್ರಜೇಶ್,ಅನನ್ಯ ಕೆ.ಎಸ್‍ರವರನ್ನು ಅಗಲಿದ್ದಾರೆ. ಮೃತರ ಮನೆಗೆ ಅನೇಕ ಗಣ್ಯರು ಆಗಮಿಸಿ ಸಂತಾಪ ಸೂಚಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು