Recent Posts

Monday, January 20, 2025
ಸುದ್ದಿ

ಮೌಲ್ವಿಯ ತಲೆ ಕಡಿದು ತಂದವರಿಗೆ 10 ಲಕ್ಷ ರೂಪಾಯಿ ಬಹುಮಾನ – ಬಸವರಾಜ್ ಯಂಕಂಚಿ

 

ಬಾಗಲಕೋಟೆ : ಹುಬ್ಬಳ್ಳಿಯ ಗಣೇಶ್ ಪೇಟೆಯನ್ನು ನೋಡಿದರೆ ಪಾಕಿಸ್ತಾನಕ್ಕೆ ಹೋಗಬೇಕಾಗಿಲ್ಲ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದ ಮೌಲ್ವಿಯ ತಲೆ ಕಡಿದು ತಂದವರಿಗೆ 10 ಲಕ್ಷ ರೂಪಾಯಿ ಬಹುಮಾನ ಕೊಡುವುದಾಗಿ ರಾಜ್ಯ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಬಸವರಾಜ್ ಸೋಮವಾರ ಘೋಷಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮೌಲ್ವಿ ಮೆಹಮೂದ್ ಖೈರಾತಿ ಕಾರ್ಯಕ್ರಮವೊಂದರಲ್ಲಿ ಮಾತನಾಡುತ್ತ ನನಗೆ ಹುಬ್ಬಳ್ಳಿಯ ಗಣೇಶ ಪೇಟೆಯನ್ನು ನೋಡಿದರೆ ಪಾಕಿಸ್ತಾನದಂತಿದೆ ಎಂದು ಹೇಳಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿನ್ನೆಲೆಯಲ್ಲಿ ಬಿಜೆಪಿ ಯುವ ಮೋರ್ಚಾದ ಬಸವರಾಜ ಯಂಕಂಚಿ ಅವರು, ಮೌಲ್ವಿ ತಲೆ ಕಡಿದು ತಂದವರಿಗೆ 10 ಲಕ್ಷ ರೂ. ನಗದು ಬಹುಮಾನ ನೀಡುವುದಾಗಿ ತಿಳಿಸಿದ್ದಾರೆ.

ಮೌಲ್ವಿ ಹೇಳಿಕೆ ನೀಡಿ 2 ದಿನ ಕಳೆದಿದೆ, ಆದರೆ ಈವರೆಗೂ ಪೊಲೀಸ್ ಇಲಾಖೆ ಮೌಲ್ವಿಯ ಬಗ್ಗೆ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.

Leave a Response