Wednesday, January 22, 2025
ಸುದ್ದಿ

ಎಂದಿನಂತೆ ಗುರುಗ್ರಾಮದಿಂದಲೇ ವೋಟ್ ಮಾಡ್ತಾರೆ ಕಿಂಗ್ ಕೊಹ್ಲಿ ..! – ಕಹಳೆ ನ್ಯೂಸ್

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸುತ್ತ ಗಿರಕಿ ಹೊಡೆಯುತ್ತಿದ್ದ ಮತದಾನದ ವಿವಾದಕ್ಕೆ ಸ್ವತಃ ಕೊಹ್ಲಿ ತೆರೆ ಎಳೆದಿದ್ದಾರೆ. ನಾನು ಮೇ 12ಕ್ಕೆ ಹರಿಯಾಣದ ಗುರುಗ್ರಾಮದಲ್ಲಿ ವೋಟ್ ಹಾಕುತ್ತಿದ್ದೇನೆ, ನೀವು..? ಎಂದು ಪ್ರಶ್ನಿಸಿ ಇನ್‍ಸ್ಟಾಗ್ರಾಮ್ ಸ್ಟೋರಿನಲ್ಲಿ ಪೋಸ್ಟ್ ಹಾಕಿದ್ದಾರೆ. ಈ ಮೂಲಕ ಕೊಹ್ಲಿಗೆ ಈ ಬಾರಿ ಮತ ಹಾಕೋಗೆ ಆಗಲ್ಲ ಅಂತ ಹೇಳತ್ತಿದ್ದವರ ಬಾಯಿ ಮುಚ್ಚಿಸಿದ್ದಾರೆ.

ಇತ್ತೀಚೆಗೆ ನಟಿ ಅನುಷ್ಕಾ ಶರ್ಮಾರನ್ನ ವಿವಾಹವಾಗಿದ್ದ ಕೊಹ್ಲಿ, ಮುಂಬೈನಲ್ಲಿ ಮನೆ ಮಾಡಿ ಅಲ್ಲೆ ವಾಸವಿದ್ದರು. ಹೀಗಾಗಿ ಕೊಹ್ಲಿ ಮುಂಬೈನಲ್ಲಿ ವೋಟ್ ಮಾಡಲು ಎಲ್ಲಾ ತಯಾರಿ ನಡೆಸಿದ್ದರು ಅಂತ ಹೇಳಲಾಗಿತ್ತು. ಈ ಹಿನ್ನೆಲೆ ವೋಟರ್ ಲಿಸ್ಟ್ನಲ್ಲಿ ಹೆಸರು ನೋಂದಾಯಿಸಲು ಎಲ್ಲಾ ಪ್ರಕ್ರಿಯಗಳನ್ನ ನಡೆಸಿದ್ದರು. ಆದ್ರೆ ಪ್ರಕ್ರಿಯೆಯ ಡೆಡ್‍ಲೈನ್ ಮುಗಿದ ಹಿನ್ನೆಲೆ ಕೊಹ್ಲಿ ದಾಖಲೆಯನ್ನ ಚುನಾವಣಾ ಅಧಿಕಾರಿಗಳು ತಮ್ಮ ಬಳಿ ಇಟ್ಟುಕೊಂಡಿದ್ದರು. ಸ್ವತಃ ಅಧಿಕಾರಗಳೇ ಈ ಬಾರಿ ಆರ್‍ಸಿಬಿ ನಾಯಕನಿಗೆ ಮುಂಬೈನಲ್ಲಿ ವೋಟ್ ಮಾಡಲು ಸಾಧ್ಯವಿಲ್ಲ. ಇನ್ನು ಮುಂದಿನ ಚುನಾವಣೆಗೆ ಅಂತ ಹೇಳಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಹೀಗಾಗಿ ಕೊಹ್ಲಿಗೆ ವೋಟ್ ಮಾಡುವ ಹಕ್ಕೇ ಇಲ್ಲ ಅಂತ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡಿದ್ರು. ಇದಕ್ಕೆ ತಿರುಗೇಟು ನೀಡಿರುವ ಕೊಹ್ಲಿ, ತಮ್ಮ ವೋಟರ್ ಐಡಿಯನ್ನೂ ಪೋಸ್ಟ್ ಮಾಡಿದ್ದು, ನನಗೆ ಗುರುಗ್ರಾಮದಲ್ಲಿ ಮತ ಹಾಕುವ ಹಕ್ಕಿದೆ. ಅಲ್ಲೇ ನಾನು ಮತದಾನ ಮಾಡುತ್ತೇನೆ ಅಂತ ಹೇಳಿದ್ದಾರೆ. ಕೊಹ್ಲಿ ಮುಂಬೈನಲ್ಲಿ ವಾಸ ಮಾಡ್ತಿದ್ರೂ, ಅವರ ಕುಟುಂಬ ಈಗಲೂ ಗುರುಗ್ರಾಮದಲ್ಲೇ ಇದೆ.

ಜಾಹೀರಾತು
ಜಾಹೀರಾತು
ಜಾಹೀರಾತು