Thursday, January 23, 2025
ಸುದ್ದಿ

ಮೋದಿಗಾಗಿ ಉಪವಾಸವೃತ, ಬಿರು ಬಿಸಿಲಲ್ಲೂ ಬರಿಗಾಲಲ್ಲೇ ಯುವಕನ ಸಂಚಾರ..! – ಕಹಳೆ ನ್ಯೂಸ್

ಬೀದರ್: ಕೆಲ ಜನ ತಮ್ಮ ಕನಸುಗಳು ಈಡೇರಲಿ, ತಮ್ಮ ಕುಟುಂಬಕ್ಕೆ ಒಳ್ಳೆಯದಾಗಲಿ ಅಂತ ದೇವರಿಗೆ ಹರಕೆ ಕಟ್ಟಿಕೊಳ್ಳುವುದು, ಉಪವಾಸ ವೃತ ಮಾಡೋದನ್ನ ನೋಡಿದ್ದೀವಿ. ಆದರೆ ಯುವಕನೊಬ್ಬ ನರೇಂದ್ರ ಮೋದಿ ಮತ್ತೆ ದೇಶದ ಪ್ರಧಾನಿ ಆಗಲಿ ಅಂತ ದೇವರಿಗೆ ಹರಕೆ ಹೊತ್ತು ಉಪವಾಸವೃತ ಮಾಡುತ್ತಿದ್ದಾರೆ.

ಇನ್ನು ಫೆಬ್ರವರಿ 28 ರಿಂದ ಉಪವಾಸ ಮಾಡುತ್ತಿದ್ದಾರೆ ಎನ್ನಲಾಗಿದೆ. ಜೊತೆಗೆ 41 ಡಿಗ್ರಿ ಸೆಲ್ಸಿಯಸ್ ತಾಪಮಾನ ಇದ್ದರೂ ಅದನ್ನ ಲೆಕ್ಕಿಸದೇ ಚಪ್ಪಲಿ ಹಾಕದೇ ನಡೆದಾಡುತಿದ್ದಾರೆ. ಅಂದ್ಹಾಗೆ ಯುವಕನ ಹೆಸರು ಪ್ರದೀಪ್ ಕುದರೆ. ಬೀದರ್ ಜಿಲ್ಲೆ ಚಿಟಗುಪ್ಪಾ ತಾಲೂಕಿನ ನಿವಾಸಿಯಾಗಿದ್ದಾರೆ. ಇವರು ಮೋದಿಯವರ ಅನೇಕ ಯೋಜನೆಗಳಿಂದ ಸಾಕಷ್ಟು ಪ್ರಭಾವಿತರಾಗಿದ್ದಾರೆ. ಹೀಗಾಗಿ ಇನ್ನೊಂದು ಅವಧಿಗೆ ಮೋದಿಯವರೇ ಪ್ರಧಾನಿಯಾದರೆ ದೇಶದ ಏಕತೆಗೆ ಸಾಕಷ್ಟು ಶ್ರಮಿಸ್ತಾರೆ. ಒಂದು ವೇಳೆ ಕಾಂಗ್ರೆಸ್ ಬಂದರೆ ದೇಶ ಒಡೆಯುತ್ತದೆ ಅಂತಾರೆ ಮೋದಿ ಅಭಿಮಾನಿ ಪ್ರದೀಪ್.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು