Thursday, January 23, 2025
ಸುದ್ದಿ

ನೋಡಿ ಸ್ವಾಮಿ ನಾವಿರೋ ಈ ಲೋಕಾನ..! – ಕಹಳೆ ನ್ಯೂಸ್

ಅನಂತ್‍ನಾಗ್‍ರಂಥ ದೈತ್ಯ ಪ್ರತಿಭೆ ಹೊಸ ಪ್ರತಿಭೆಗಳ ಜೊತೆ ಮತ್ತೊಂದು ಕುತೂಹಲ ಮೂಡಿಸೊ ಚಿತ್ರದಲ್ಲಿ ನಟಿಸಿದ್ದು, ವೀಕೆಂಡ್ ಅನ್ನೊ ಆ ಚಿತ್ರದ ಎರಡನೇ ಲಿರಿಕಲ್ ವೀಡಿಯೋ ರಿಲೀಸ್ ಆಗಿದ್ದು ಸಖತ್ ಪೆಪ್ಪಿಯಾಗಿದೆ..! ಯುವ ಪ್ರತಿಭೆ ಸಂಜಿತ್ ಹೆಗಡೆ ಹಾಗೂ ರಾಜೇಶ್ ಕೃಷ್ಣನ್ ಹಾಗೂ ಲಕ್ಷ್ಮೀ ವಿಜಯ್ ಹಾಡಿರೋ ನೋಡಿ ಸ್ವಾಮಿ ನಾವಿರೋ ಈ ಲೋಕಾನ ಅನ್ನೋ ಹಾಡು ವೀಕೆಂಡ್‍ನಲ್ಲಿ ಗುಂಗು ಹಿಡಿಸುವಂತಿದೆ.

ನೋಡಿ ಸ್ವಾಮಿ ನಾವಿರೋ ಈ ಲೋಕಾನಾ-ತಿರುಗುತ್ತಿದ್ರು ಗೊತ್ತಾಗೊಲ್ಲ, ಬನ್ನಿ ಸ್ವಾಮಿ ನಾವು ಜೊತೆಲಿ ಸಾಗೋಣ-ಹೊತ್ಕಂಡು ಹೋಗೋಕೇನು ಇಲ್ಲ ಅಂತಾ ಸಾಗೋ ಈ ಹಾಡನ್ನ ಧನಂಜಯ್ ರಂಜನ್ ಬರೆದಿದ್ದು, ಯುವ ಪ್ರತಿಭೆ ಮನೋಜ್ ಎಸ್ ಸಂಗೀತ ಸಂಯೋಜಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಶೇಷ ಅಂದರೆ ವಿಭಿನ್ನ ಹಾಡುಗಳು ಹಾಗೂ ಕಥಾ ಹಂದರದಿಂದ ಮನ ಸೆಳೆಯುವಂತಿರೋ ಈ ವೀಕೆಂಡ್ ಚಿತ್ರವನ್ನು ಶೃಂಗೇರಿ ಸುರೇಶ್ ನಿರ್ದೇಶಿಸಿದ್ದು, ಇದು ಫ್ಯಾಮಿಲಿ ಡ್ರಾಮಾ ಹಾಗೂ ಸಸ್ಪೆನ್ಸ್ ಥ್ರಿಲ್ಲರ್ ಕಥಾ ಹಂದರ ಹೊಂದಿದೆ ಅಂತಾರೆ ಅವರು. ಇನ್ನು ಮಯೂರ ಮೋಷನ್ ಪಿಕ್ಚರ್ಸ್ ಬ್ಯಾನರ್‍ನಲ್ಲಿ ಮೂಡಿಬಂದಿರೋ ಈ ಚಿತ್ರವನ್ನು ಮಂಜುನಾತ್.ಡಿ ನಿರ್ಮಿಸಿದ್ದಾರೆ. ವಿಶೇಷ ಅಂದ್ರೆ ಈ ಚಿತ್ರದಲ್ಲಿ ಅನಂತ್ ನಾಗ್ ವಿಭಿನ್ನ ಮತ್ತು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇನ್ನು ಹೊಸ ಪ್ರತಿಭೆಗಳಾದ ಮಿಲಿಂದ್, ಸಂಜನಾ ಬುರ್ಲಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ನಾಗಭೂಷಣ್, ಗೋಪಿನಾಥ್ ಭಟ್ ಮುಂತಾದ ಪ್ರತಿಭಾವಂತರ ದೊಡ್ಡ ತಂಡವೇ ಈ ಚಿತ್ರದಲ್ಲಿ ನಟಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು