Recent Posts

Monday, January 20, 2025
ಸುದ್ದಿ

ರಕ್ತದಲ್ಲಿ ಬರೆದ ಅಭಯಾಕ್ಷರ ಪತ್ರ ; ಗೋಹತ್ಯೆ ನಿಷೇಧಕ್ಕಾಗಿ ರಕ್ತ ಬರಹ

 

ಉತ್ತರಕನ್ನಡ : ಜಿಲ್ಲೆಯ ಕುಮಟಾ ತಾಲೂಕು ಕಡತೋಕಾ ಗ್ರಾಮದ ಬಗ್ಗೋಣ ಭಟ್ಟರ ಮನೆಯ ಸುರೇಶ್ ತಿಮ್ಮಣ್ಣ ಭಟ್ ರವರು ತಮ್ಮ ರಕ್ತದಿಂದ ಬರೆದ
ಅಭಯಾಕ್ಷರ ಪತ್ರವನ್ನು ಜಗದ್ಗುರು ಶಂಕರಾಚಾರ್ಯ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರಿಗೆ ಸಮರ್ಪಿಸಿದರು.ಇವರು ಮೂಲತಃ ಕೃಷಿಕರಾಗಿದ್ದು ಪತ್ನಿ ಮಕ್ಕಳೊಂದಿಗೆ ಕೃಷಿ ಮತ್ತು ಗೋಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.ಶ್ರೀ ರಾಮಚಂದ್ರಾಪುರಮಠ ಗೋಯಾತ್ರೆಗಳಲ್ಲಿ ಗೋಕಿಂಕರರಾಗಿಯೂ ಸೇವೆ ಸಲ್ಲಿಸಿದವರಾಗಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲೂ ಇಂತಹ ಹಲವು ಪ್ರೇರಣಾದಯಿ ವಿಚಾರಗಳು ನಡೆದಿರುವುದು ಕಂಡುಬರುತ್ತದೆ.ಈ ರಕ್ತಾಕ್ಷರ ಅಭಯಗೋಯಾತ್ರೆಯ ಸ್ಪೂರ್ತಿಯಾಗಿ,ಕನ್ನಡನಾಡಿನ ಜನರಿಗೆ ಪ್ರೇರಣೆ ಯಾಗಿದೆ ಎಂದು ಭಾರತೀಯ ಗೋಪರಿವಾರ ಕರ್ನಾಟಕ ರಾಜ್ಯ ಪ್ರಕಟನೆಯಲ್ಲಿ ತಿಳಿಸಿದೆ.
ಇದೇ ಕಾರ್ಯಕ್ರಮದಲ್ಲಿ ಜಗದ್ಗುರು
ಶಂಕರಾಚಾರ್ಯ ರಾಘವೇಶ್ವರ ಭಾರತೀಮಹಾಸ್ವಾಮಿಗಳು ರಕ್ತದಲ್ಲಿ ಪತ್ರ ಬರೆದು ಗೋವನ್ನು ಉಳಿಸುವ ಶ್ರೇಷ್ಠ ರು ಕುಮಟಾದ ನೆಲದಲ್ಲಿರುವುದು ಹೆಮ್ಮೆಯ ವಿಚಾರ .ಈ ಪತ್ರ ನೋಡಿ ನಮ್ಮೆದೆ ಮಿಡಿದಿದೆ.ಆ ದೃಷ್ಟಿಯಿಂದ ಈ ಬಗೆಯ ರಕ್ತಪತ್ರವೆನ್ನುವುದು ಸ್ವರ್ಣಪತ್ರಕ್ಕಿಂತಲೂ ಅತ್ಯಂತ ಹೆಚ್ಚಿನದ್ದಾಗಿದೆ.’ ಎಂದು ಹೇಳಿರುವುದನ್ನು ಸ್ಮರಿಸಬಹುದು.

Leave a Response