ಬೆಂಗಳೂರು : ಕಾಂಗ್ರೆಸ್ಸಿನ ಸಾಮಾಜಿಕ ಜಾಲ ತಾಣ ವಿಭಾಗದ ಮುಖ್ಯಸ್ಥೆ ರಮ್ಯಾ ಅಲಿಯಾಸ್ ದಿವ್ಯ ಸ್ಪಂದನಾ ಅನೇಕ ವಿವಾದಗಳ ಮೂಲಕ ಹೆಸರು ಮಾಡುತ್ತಿದ್ದರೆ, ಇದೀಗ ಪ್ರಧಾನಿ ಮೋದಿಯನ್ನ ಜರ್ಮನಿ ಸರ್ವಾಧಿಕಾರಿ ಹಿಟ್ಲರ್‌ಗೆ ಹೋಲಿಸಿ ಹೊಸ ಎಡವಟ್ಟು ಮಾಡಿಕೊಂಡಿದ್ದಾರೆ.
ರಮ್ಯಾ ಅವರು ಇಂದು ಟ್ವೀಟ್, ಇನ್ಸ್ಟಾಗ್ರಾಂ ಪೋಸ್ಟ್ ಗಳಲ್ಲಿ ಇಬ್ಬರು ನಾಯಕರು ಮಗುವೊಂದರ ಕಿವಿ ಹಿಂಡುತ್ತಿರುವ ಚಿತ್ರದ ಕೊಲಾಜ್ ಹಂಚಿಕೊಂಡಿದ್ದಾರೆ. ಚಿತ್ರದ ಎಡಬದಿಯಲ್ಲಿ ಜರ್ಮನಿಯ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಅವರು ಮಗುವಿನ ಕಿವಿ ಹಿಂಡುತ್ತಿದ್ದರೆ, ಬಲಬದಿಯಲ್ಲಿ ಮೋದಿ ಅವರು ಕಿವಿ ಹಿಂಡುತ್ತಿದ್ದಾರೆ. ಇದಕ್ಕೆ ಅಡಿಬರಹ ನೀಡಿ, Speaking of Similarities ಎಂದು ರಮ್ಯಾ ಹೇಳಿದ್ದಾರೆ.
ಟ್ವೀಟ್ ಗೆ ಸದ್ಯಕ್ಕೆ 410 ರೀಟ್ವೀಟ್ಸ್ 1322 ಲೈಕ್ಸ್ ಬಂದಿದೆ. ಇದಕ್ಕೆ ಭಾರಿ ಪ್ರತಿಕ್ರಿಯೆಗಳು ಹರಿದು ಬರುತ್ತಿವೆ.