ಟೀಂ ಇಂಡಿಯಾ ವೇಗದ ಬೌಲರ್ ಮಹಮ್ಮದ್ ಶಮಿ ಮಾಜಿ ಪತ್ನಿ ಹಸೀನ್ ಜಹಾನ್ ಅವರನ್ನ, ಉತ್ತರ ಪ್ರದೇಶದ ಅಮ್ರೋಹ ಪೊಲೀಸರು ಕಳೆದ ರಾತ್ರಿ ಬಂಧಿಸಿದ್ದಾರೆ. ತಡರಾತ್ರಿ ಸಾಹಸ್‍ಪುರ್ ಅಲಿ ನಗರ ದಲ್ಲಿನ ಮನೆಗೆ ನುಗ್ಗಿದ ಹಸೀನ್ ಜಹಾನ್, ಶಮಿ ತಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಗಲಾಟೆ ಮಾಡಿದ್ದಾರೆ ಎನ್ನಲಾಗ್ತಿದೆ.
ಮಗಳು ಬೇಬೋ ಜೊತೆಗೆ ಶಮಿ ಮನೆಗೆ ಹೋದ ಜಹಾನ್, ಶಮಿ ತಾಯಿ ಸೇರಿದಂತೆ ಮನೆಯವರ ಜೊತೆ ಜಗಳಕ್ಕಿಳಿದಿದ್ದಾರೆ. ಆಗ ಶಮಿ ಮನೆಯವರು ಪೊಲೀಸರಿಗೆ ದೂರು ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ಯಾವುದೇ ವಾರಂಟ್ ಅಗತ್ಯವಿಲ್ಲದ 151 ಸೆಕ್ಷನ್ ಅಡಿಯಲ್ಲಿ ಜಹಾನ್‍ರನ್ನ ಬಂಧಿಸಿದ್ದಾರೆ. ಶಮಿ ಪತ್ನಿಯಾಗಿದ್ದ ಹಸೀನಾ ಶಮಿಗೆ ಬೇರೆ ಮಹಿಳೆಯರ ಜೊತೆ ಅಕ್ರಮ ಸಂಬಂಧ ಹೊಂದಿದ್ದಾರೆ. ಶಮಿ ಅವರ ಮನೆಯವರು ನನ್ನನ್ನು ಕೊಲ್ಲಲು ಪ್ರಯತ್ನಿಸಿದ್ರು ಅಂತಾ ಆರೋಪಿಸಿದ್ರು.
ಆದ್ರೆ ಈ ಎಲ್ಲಾ ಆರೋಪಗಳನ್ನು ಅಲ್ಲಗಳೆದಿದ್ದ ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಕೋರ್ಟ್ ಸಮ್ಮಖದಲ್ಲಿ ವಿಚ್ಛೇದನ ಪಡೆದಿದ್ದರು, ಹೀಗಾಗಿ ಶಮಿ ಜಹಾನ್‍ಗೆ ಜೀವನಾಂಶವಾಗಿ ಪ್ರತಿ ತಿಂಗಳು 80 ಸಾವಿರ ರೂಪಾಯಿ ನೀಡುವಂತೆ ಆದೇಶಿಸಿದೆ.ಆದ್ರೆ ಇತ್ತೀಚೆಗೆ ಶಮಿ ನೀಡಿದ ಜೀವನಾಂಶದ ಚೆಕ್ ಬೌನ್ಸ್ ಆಗಿದೆ ಎಂದು ಹಸೀನಾ, ಕೋಲ್ಕತ್ತಾ ಮ್ಯಾಜಿಸ್ಟ್ರೇಟ್ ಕೋರ್ಟ್ ಮೊರೆ ಹೋಗಿದ್ರು. ಇದಕ್ಕೆ ಸಂಬಂಧಿಸಿದಂತೆ ಕೋರ್ಟ್ ಶಮಿಗೆ ಸಮನ್ಸ್ ಜಾರಿ ಮಾಡಿತ್ತು.ಅಲ್ಲದೆ ನ್ಯಾಯಲಯದ ನಿಯಮಗಳನ್ನ ಉಲ್ಲಂಘಿಸಿದ್ರೆ ಅರೆಸ್ಟ ವಾರೆಂಟ್ ಜಾರಿ ಮಾಡಲಾಗುವುದು ಎಂದು ಎಚ್ಚರಿಸಿತ್ತು.