Tuesday, January 21, 2025
ಸುದ್ದಿ

100 ವರ್ಷಗಳ ಹಿಂದೆ ಕಳುವಾಗಿದ್ದ 700 ವರ್ಷ ಹಳೆಯ ವಿಗ್ರಹ ಮನೆ ಗೋಡೆಯಲ್ಲಿ ಪತ್ತೆ..! – ಕಹಳೆ ನ್ಯೂಸ್

ಮಧುರೈ: ತಮಿಳುನಾಡಿನಲ್ಲಿ ಸುಮಾರು 100 ವರ್ಷಗಳ ಹಿಂದೆ ಕಾಣೆಯಾಗಿದ್ದ ವಿಗ್ರಹವೊಂದು ಮನೆಯ ಗೋಡೆಯಲ್ಲಿ ಪತ್ತೆಯಾಗಿದ್ದು, ಭಕ್ತರಲ್ಲಿ ಸಂತಸ ಮೂಡಿಸಿದೆ. 1915ರಲ್ಲಿ ಮಧುರೈನ ಮೇಲೂರು ದೇವಸ್ಥಾನದಲ್ಲಿ 700 ವರ್ಷಗಳಷ್ಟು ಹಳೆಯದಾದ ಈ ವಿಗ್ರಹ ಕಾಣೆಯಾಗಿತ್ತು. ದೇವಸ್ಥಾನದ ಇಬ್ಬರು ಪೂಜಾರಿಗಳಲ್ಲಿ ಒಬ್ಬರಾದ ಕರುಪ್ಪಸ್ವಾಮಿ ಎಂಬವರು ಈ ವಿಗ್ರಹ ಕದ್ದಿದ್ದಾರೆ ಎಂದು ಆರೋಪಿಸಲಾಗಿತ್ತು.

ನಿನ್ನೆ ಈ 1.5 ಅಡಿ ಉದ್ದದ ದ್ರೌಪದಿ ಅಮ್ಮನ ವಿಗ್ರಹವನ್ನು ಪೊಲೀಸರು ವಶಕ್ಕೆ ಪಡೆದು ದೇವಸ್ಥಾನಕ್ಕೆ ನೀಡಿದ್ದಾರೆ. ಈ ದೇವಸ್ಥಾನ ಸುಮಾರು 800 ವರ್ಷಗಳಷ್ಟು ಹಳೆಯದ್ದಾಗಿದ್ದು, 15 ದಿನಗಳಲ್ಲಿ ವಾರ್ಷಿಕ ಉತ್ಸವ ನಡೆಯಬೇಕಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ವಿಗ್ರಹ ಸಿಕ್ಕಿದ್ದು ಹೇಗೆ?
ಕರುಪ್ಪಸ್ವಾಮಿಯ ಮೊಮ್ಮಗ ಮುರುಗೇಸನ್(60) ಆರು ತಿಂಗಳ ಹಿಂದೆ ದೇವಸ್ಥಾನಕ್ಕೆ ಭೇಟಿ ನೀಡಿದಾಗ, ವಿಗ್ರಹದ ರಹಸ್ಯವನ್ನು ಬಹಿರಂಗಪಡಿಸಿದ್ದರು. ದೇವಿಯ ಕೋಪದಿಂದ ತನ್ನ ಹಲವಾರು ಸಂಬಂಧಿಕರು ಸಾವನ್ನಪ್ಪಿದ್ದಾರೆ ಹಾಗೂ ತನಗೂ ಆರೋಗ್ಯದಲ್ಲಿ ಸಮಸ್ಯೆಯಾಗಿದೆ ಎಂದೆನಿಸಿ ಎಲ್ಲಾ ವಿಷಯವನ್ನ ಬಾಯ್ಬಿಟ್ಟಿದ್ದರು. ಚಿಕ್ಕವನಾಗಿದ್ದಾಗ, ತನ್ನ ತಂದೆ ಹಾಗೂ ತಾತ ಹಿರಿಯ ತಲೆಮಾರಿನ ಮನೆಯೊಂದರಲ್ಲಿ ಗೋಡೆಗೆ ಪೂಜೆ ಮಾಡೋದನ್ನ ನಾನು ನೋಡಿದ್ದೆ ಎಂದು ಮುರುಗೇಸನ್ ಹೇಳಿದ್ದಾಗಿ ಪೊಲೀಸರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕರುಪ್ಪಸ್ವಾಮಿ ಮತ್ತೋರ್ವ ಪೂಜಾರಿಯೊಂದಿಗೆ ಜಗಳ ಮಾಡಿಕೊಂಡ ಬಳಿಕ ವಿಗ್ರಹವನ್ನು ತೆಗೆದುಕೊಂಡು ಹೋಗಿದ್ದರು. ವಿಗ್ರಹ ಕಾಣೆಯಾದ ಬಗ್ಗೆ ಅದೇ ವರ್ಷ ಪೊಲೀಸರಿಗೆ ದೂರು ನೀಡಲಾಗಿತ್ತು. ಅಂದಿನ ಬ್ರಿಟಿಷ್ ಪೊಲೀಸರು ಸಾಕಷ್ಟು ಹುಡುಕಾಟ ನಡೆಸಿದ್ದರೂ ವಿಗ್ರಹ ಪತ್ತೆಯಾಗಿರಲಿಲ್ಲ. ಕರುಪ್ಪಸ್ವಾಮಿ ಮನೆಯ ಗೋಡೆಯನ್ನು ಭಾಗಶಃ ಒಡೆದುಹಾಕಿ ವಿಗ್ರಹವನ್ನು ಅದರೊಳಗೆ ಇಟ್ಟು ಮತ್ತೆ ಗೋಡೆ ಕಟ್ಟಿದ್ದರು.

ಮುರುಗೇಸನ್ ವಿಷಯ ತಿಳಿಸಿದಾಗಿನಿಂದ ಗ್ರಾಮಸ್ಥರು ವಿಗ್ರಹ ಪಡೆಯಲು ತವಕದಲ್ಲಿದ್ದರು. ಆರಂಭದಲ್ಲಿ ಗ್ರಾಮಸ್ಥರಿಗೆ ಹಾಗೂ ಪೊಲೀಸರಿಗೆ ಆತಂಕವಿತ್ತು. ಹಾಗೇ ಆ ಮನೆ ಕೂಡ ಬೇರೆಯವರಿಗೆ ಸೇರಿದ್ದಾಗಿತ್ತು. ಆದ್ರೆ ಇತ್ತೀಚೆಗೆ ಲಿಖಿತ ದೂರು ಸ್ವೀಕರಿಸಿದ ಬಳಿಕ ವಿಗ್ರಹದ ಪತ್ತೆಗೆ ಮುಂದಾಗಿದ್ದಾಗಿ ಪೊಲೀಸರು ಹೇಳಿದ್ದಾರೆ. ಇನ್ನು ಮನೆಯ ಓನರ್ ಮಚ್ಚಕಾಳೈಗೆ ಪೊಲೀಸರು ಗೋಡೆ ಒಡೆಯುವ ಬಗ್ಗೆ ಯಾವುದೇ ಆಕ್ಷೇಪ ಇರಲಿಲ್ಲ. ಅವರೇ ಮನೆಯನ್ನ ಡೆಮಾಲಿಶ್ ಮಾಡಲು ಯೋಚಿಸುತ್ತಿದ್ದರು ಎಂದು ಹೇಳಿದ್ದಾರೆ. ಕೊನೆಗೆ ಮುರುಗೇಸನ್ ಹೇಳಿದ ಸ್ಥಳದಲ್ಲೇ ವಿಗ್ರಹ ಪತ್ತೆಯಾಗಿದೆ.

ದೇವಸ್ಥಾನದಲ್ಲಿ ವಿಗ್ರಹದ ಬಗ್ಗೆ ದಾಖಲೆಗಳಿದ್ದವು. ವಿಗ್ರಹದಲ್ಲಿ ಮೂರನೇ ಕಣ್ಣು ಇರುವ ಬಗ್ಗೆ ಉಲ್ಲೇಖವಿತ್ತು. ಹೀಗಾಗಿ ಪೊಲೀಸರು ವಿಗ್ರಹವನ್ನು ಪರಿಶೀಲಿಸಿದಾಗ ಸಂಪೂರ್ಣವಾಗಿ ಮ್ಯಾಚ್ ಆಗಿದೆ. ಸದ್ಯ ಗ್ರಾಮಸ್ಥರು ವಿಗ್ರಹವನ್ನು ಪಡೆದು, ಅದ್ಧೂರಿ ಉತ್ಸವಕ್ಕೆ ಸಿದ್ಧತೆ ನಡೆಸಿದ್ದಾರೆ.