ಶ್ರೀಲಂಕಾ ಸರ್ಕಾರವು ಭೀಕರವಾದ ಉಗ್ರರ ದಾಳಿಯಿಂದ, ಉಗ್ರರು ದಾಳಿಗೆ ಬಳಸಿಕೊಂಡಿದ್ದ ಬುರ್ಖಾವನ್ನು ರಾಷ್ಟ್ರಾದ್ಯಂತ ನಿಷೇಧ ಮಾಡಿದ ಬೆನ್ನಲೇ, ಭಾರತದಲ್ಲೂ ಬುರ್ಖಾ ನಿಷೇಧದ ಕೂಗು ಕೇಳಲು ಶುರುವಾಗಿದೆ. ಭಾರತದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಬುರ್ಖಾವನ್ನು ನಿಷೇಧ ಮಾಡಬೇಕು ಎಂದು ಸಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಅಷ್ಟಕ್ಕೂ ಬುರ್ಖಾ ಧರಿಸುವುದು ಮುಸಲ್ಮಾನರ ಸಾಂಸ್ಕೃತಿಕ ಭಾಗವೇನಲ್ಲ. ಬುರ್ಖಾದ ಹಿನ್ನಲೆಯನ್ನು ನೋಡುತ್ತಾ ಹೋದರೆ ಸೌದಿ ಅರೇಬಿಯಾದಂತಹ ಮರಳುಗಾಡು ಪ್ರದೇಶದಲ್ಲಿ ಹೆಚ್ಚಾಗಿ ಮರಳು ಮಿಶ್ರಿತ ಬಿಸಿ ಗಾಳಿ ಬೀಸುವುದರಿಂದಾಗಿ, ದೈಹಿಕ ರಕ್ಷಣೆಗೆ ದೇಹವನ್ನು ಸಂಪೂರ್ಣವಾಗಿ ಮುಚ್ಚುವಂತಹ ಬುರ್ಖಾಗಳ ಬಳಕೆ ಆರಂಭವಾಯಿತು.
ಅದನ್ನೇ ಜಗತ್ತಿನಾದ್ಯಂತ ನಂತರ ಮುಸಲ್ಮಾನ ಮುಹಿಳೆಯರು ಕಡ್ಡಾಯವಾಗಿ ಬಳಸಲು ಪ್ರಾರಂಭಿಸಿದರು. ಆದರೆ ಈ ಬುರ್ಖಾವನ್ನು ಬಳಸಿಕೊಂಡು ಭಯೋತ್ಪಾದಕರು ಹಿಂಸಾತ್ಮಕ ಕೃತ್ಯವೆಸಗುವುದರಿಂದಾಗಿ ಭಾರತದಲ್ಲೂ ಬುರ್ಖಾ ನಿಷೇಧದ ಕೂಗು ಕೇಳಿ ಬರುತ್ತಿವೆ.