Tuesday, January 21, 2025
ಸುದ್ದಿ

ಬಾಲಿವುಡ್ ಆಫರ್ ತಿರಸ್ಕರಿಸಿದ ರಶ್ಮಿಕಾ ಮಂದಣ್ಣ – ಕಹಳೆ ನ್ಯೂಸ್

ಹೌದು ಕಿರಿಕ್‍ಪಾರ್ಟಿ ಮೂಲಕ ಕರ್ನಾಟಕ ಕ್ರಷ್ ಎಂದು ಖ್ಯಾತಿಗೊಂಡು ತದನಂತರ ಬೆನ್ನಬೆನ್ನಿಗೆ ತೆಲುಗಿನಲ್ಲಿ ಸಿನೆಮಾ ಮಾಡಿದ ರಶ್ಮಿಕಾ ಕೈಯಲ್ಲಿ ಕನ್ನಡ, ತಮಿಳು, ತೆಲುಗು ಸಿನೆಮಾಗಳಿವೆ. ಹೀಗಿರುವಾಗ ಈ ಸೌತ್ ಸೆನ್ಸೇಷನನ್ನು ಹುಡುಕಿಕೊಂಡು ಬಾಲಿವುಡ್‍ನಿಂದ ಅವಕಾಶ ಬಂದಿತ್ತಂತೆ. ಅದೂ ಸಣ್ಣ ಪುಟ್ಟ ಅವಕಾಶ ಅಲ್ಲ, ಬಾಲಿವುಡ್‍ನ ಸ್ಟಾರ್ ಡೈರೆಕ್ಟರ್ ಸಂಜಯ್ ಲೀಲಾ ಬನ್ಸಾಲಿ ಅವರಿಂದ.

ಪದ್ಮಾವತ್ ಮಾಡಿದ ನಂತರ ಬನ್ಸಾಲಿ ಸಲ್ಮಾನ್‍ಗೆ ಆ್ಯಕ್ಷನ್ ಕಟ್ ಹೆಳ್ತಾರೆ ಅಂತ ಸುದ್ದಿಯಾಗಿತ್ತು. ಅದಾದ್ಮೇಲೆ ರಣದೀಪ್ ಹೂಡಾರನ್ನು ನಾಯಕನನ್ನಾಗಿ ಥ್ರಿಲ್ಲರ್ ಸಿನೆಮಾ ಮಾಡ್ತಾರೆ ಅಂತ ಹೊಸ ಸುದ್ದಿ ಹೊರಬಂತು. ಈ ಹೆಸರಿಡದ ಥ್ರಿಲ್ಲರ್ ಚಿತ್ರದಲ್ಲಭಿನಯಿಸಲು ರಶ್ಮಿಕಾರಿಗೆ ಚಾನ್ಸ್ ನೀಡಲಾಗಿತ್ತು. ಆದರೀಗ ಈ ಆಫರ್ ಅನ್ನು ರಶ್ಮಿಕಾ ನಯವಾಗಿ ತಿರಸ್ಕರಿಸಿದ್ದಾರೆಂದು ತಿಳಿದು ಬಂದಿದೆ. ಯಾವ ಕಾರಣಕ್ಕಾಗಿ ರಶ್ಮಿಕಾ ನೋ ಎಂದಿದ್ದಾರೆ ಎಂದು ತಿಳಿದು ಬಂದಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು

ಪ್ರಸ್ತುತ ಕನ್ನಡದಲ್ಲಿ ಧ್ರುವ ಸರ್ಜಾ ನಟನೆಯ ಪೊಗರು, ತಮಿಳಿನ ಇನ್ನೂ ಹೆಸರಿಡದ ಕಾರ್ತಿ ಜೊತೆಗಿನ ಚಿತ್ರ ಮತ್ತು ತೆರೆಕಾಣಲು ಸಜ್ಜಾಗಿರುವ ‘ಡೀಯರ್ ಕಾಮ್ರೆಡ್’ ತೆಲುಗು ಚಿತ್ರಗಳಿವೆ. ಇದಾದ ಮೇಲೆ ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಜೊತೆ ನಟಿಸಲಿದ್ದಾರೆ ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು