Monday, January 20, 2025
ಸುದ್ದಿ

ಸೀಮಂತ ಸಮಾರಂಭದ ಊಟ ಸೇವಿಸಿ ಹಲವಾರು ಮಂದಿ ಅಸ್ವಸ್ಥ – ಕಹಳೆ ನ್ಯೂಸ್

ಬಂಟ್ವಾಳ: ಸೀಮಂತ ಸಮಾರಂಭವೊಂದರಲ್ಲಿ ಊಟ ಸೇವಿಸಿ ಹಲವಾರು ಮಂದಿ ಅಸ್ವಸ್ಥಗೊಂಡ ಘಟನೆ ಮೇರಮಜಲು ಸಮೀಪದ ಬಡ್ಡೂರು ಎಂಬಲ್ಲಿ ನಡೆದಿದೆ.

ಬಡ್ಡೂರು ಸ್ಥಳೀಯ ನಿವಾಸಿಯೊಬ್ಬರ ಪತ್ನಿಯ ಸೀಮಂತ ಕಾರ್ಯಕ್ರಮವಿದ್ದು ಕ್ಯಾಟರಿಂಗ್ ಸಂಸ್ಥೆಯೊಂದು ಊಟೋಪಚಾರದ ವ್ಯವಸ್ಥೆ ಮಾಡಿತ್ತು. ಮಧ್ಯಾಹ್ನ ಊಟ ಸೇವಿಸಿದ ಅನೇಕ ಮಂದಿಗೆ ರಾತ್ರಿ ಹೊಟ್ಟೆ ನೋವು ಕಾಣಿಸಿಕೊಂಡು ವಾಂತಿ ಭೇದಿ ಶುರುಗಿವಾದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ತೀವ್ರ ಅಸ್ವಸ್ಥಗೊಂಡವರು ತುಂಬೆಯ ಖಾಸಗಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದರೆ, ಇನ್ನೂ ಕೆಲವರು ವೈದ್ಯರಿಂದ ಔಷಧಿ ಪಡೆದು ಮನೆಗೆ ವಾಪಸ್ಸಾಗಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು