ನವದೆಹಲಿ: ಭಾರತದ ಅತ್ಯಂತ ಯಶಸ್ವಿ ಉದ್ಯಮಿಗಳ ಸಾಲಿನಲ್ಲಿ ಮಹಿಂದ್ರಾ ಗ್ರೂಪ್‍ನ ಸಂಸ್ಥಾಪಕ ಆನಂದ್ ಮಹಿಂದ್ರಾ ಕೂಡ ಪ್ರಮುಖರು. ತಮ್ಮ ದಿನನಿತ್ಯದ ಬಿಡುವಿಲ್ಲದ ವಹಿವಾಟುಗಳ ನಡುವೆಯೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುತ್ತಾರೆ. ಹಾಗೆಯೇ ಇವರು ಮಾಡಿರುವ ಪೋಸ್ಟ್‍ವೊಂದು ಈಗ ಟ್ವಿಟರ್‍ನಲ್ಲಿ ಸದ್ದು ಮಾಡುತ್ತಿದ್ದು, ಟ್ರೆಂಡ್ ಸೃಷ್ಟಿ ಮಾಡಿದೆ.
62 ವರ್ಷಗಳಿಂದ ವ್ಯಕ್ತಿಯೊಬ್ಬ ತನ್ನ ಹೆಂಡತಿಯ ಮಾತುಗಳನ್ನು ಕೇಳಿಸಿಕೊಳ್ಳಬಾರದು ಅಂತ, ಕಿವುಡ ಮತ್ತು ಮೂಗನಂತೆ ನಟಿಸಿ ವಂಚಿಸಿರುವ ಬಗ್ಗೆ ಬಂದಿರುವ ಬರಹವನ್ನ ತಮ್ಮ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಈ ಮೇಲಿನ ಬರಹ ಓದಿ ನನಗೆ 5 ನಿಮಿಷ ನಗು ತಡೆಯಲಾಗಲಿಲ್ಲ. ನಾನು ನನ್ನ ಹೆಂಡತಿ ಬಳಿ ಕೇಳಿದೆ, ಒಂದು ವೇಳೆ ನಾನು ಕೂಡ ಇದೆ ರೀತಿ ವಂಚಿಸಿದ್ದರೆ ಅಂತ. ಇದಕ್ಕೆ ಆಕೆ 5 ಸೆಕೆಂಡ್ ಕೂಡ ವ್ಯರ್ಥ ಮಾಡದೆ ಹೌದಾ.? ಹಾಗಾದರೆ ನೀವು 5 ನಿಮಿಷಗಳವರೆಗೆ ನಿಮ್ಮ ಮೊಬೈಲ್‍ನಲ್ಲಿ ಮಾತನಾಡದೆ ಇರುವಿರಾ.? ಅಂತ ಪ್ರಶ್ನಿಸಿದಳು. ಇದು ಸ್ಮಾರ್ಟ್ ಹೆಂಡತಿಯಿಂದ ಉಂಟಾಗುವ ಅಪಾಯ ಅಂತ ಟ್ವೀಟ್‍ನಲ್ಲಿ ಬರೆದಿದ್ದಾರೆ.