ನಾಳೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ‘99’ ಸಿನೆಮಾ ರಾಜ್ಯದಾದ್ಯಂತ ತೆರೆಕಾಣಲಿದೆ. ಗಣೇಶ್‍ಗೆ ನಾಯಕಿಯಾಗಿ ರೋಮಿಯೋ ನಂತರ ಭಾವನಾ ಮತ್ತೆ ಜೋಡಿಯಾಗಿದ್ದಾರೆ. ಟಗರು ನಂತರ ಭಾವನಾ ಅಭಿನಯದ ಚಿತ್ರ ಇದಾಗಿದೆ.
‘99’ ತಮಿಳಿನ ಸೂಪರ್ ಹಿಟ್ ವಿಜಯ್ ಸೇತುಪತಿಯ ‘96’ ಚಿತ್ರದ ರೀಮೇಕ್ ಆಗಿದ್ದರೂ ಕನ್ನಡದ ನೇಟಿವಿಟಿಗೆ ತಕ್ಕಂತೆ ಬದಲಾವಣೆ ಮಾಡಲಾಗಿದೆಯಂತೆ. ಚಿತ್ರಕ್ಕೆ ಮ್ಯಾಜಿಕಲ್ ಕಂಪೋಸರ್ ಅರ್ಜುನ್ ಜನ್ಯ ಸಂಗೀತ ನಿರ್ದೇಶನ ಮಾಡಿದ್ದಾರೆ. ಇದು ಅರ್ಜುನ್ ಸಂಗೀತ ನಿರ್ದೇಶನದ 100ನೇ ಚಿತ್ರ ಎನ್ನುವುದು ವಿಶೇಷ.
ಭರ್ಜರಿ ಆ್ಯಕ್ಷನ್ ಚಿತ್ರಗಳನ್ನು ನಿರ್ಮಾಣ ಮಾಡುತ್ತಿದ್ದ ರಾಮು ನ್ಯಾಚುರಲ್ ಲವ್ ಸ್ಟೋರಿಯ 99 ಸಿನೆಮಾವನ್ನು ನಿರ್ಮಿಸಿರುವುದು ಇನ್ನೊಂದು ವಿಶೇಷ. ಈಗಾಗಲೇ ಬಿಡುಗಡೆಗೊಂಡಿರುವ ಹಾಡುಗಳು ಮತ್ತು ಟ್ರೈಲರ್‍ಗಳು ಪ್ರೇಕ್ಷಕನ ಮನ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ನಾಳೆ ಚಿತ್ರ ನೋಡಿ ಪ್ರೇಕ್ಷಕ ಏನು ಹೇಳುತ್ತಾನೆ ಎಂದು ಕಾದು ನೋಡಬೇಕಾಗಿದೆ.