Monday, January 20, 2025
ಕ್ರೀಡೆಸುದ್ದಿ

ಗೋಲು ಬಾರಿಸಿದವನ ಶೂ, ಹರಾಜಿನಲ್ಲೂ ದಾಖಲೆ..! – ಕಹಳೆ ನ್ಯೂಸ್

ಪ್ರಸಿದ್ಧ ಕಲಾವಿದರು ಹಾಗೂ ಕ್ರೀಡಾಪಟುಗಳು ಬಳಸಿರುವ ವಸ್ತುಗಳನ್ನ ಕೊಂಡುಕೊಳ್ಳಲು ಉದ್ಯಮಿಗಳು, ಅಭಿಮಾನಿಗಳು ತುದಿಗಾಲಲ್ಲಿ ನಿಂತಿರುತ್ತಾರೆ. ಆಟಗಾರರು ಕೂಡ ತಮ್ಮಲ್ಲಿನ ವಿಭಿನ್ನ ಅಥವಾ ಬಹುಮುಖ್ಯ ವಸ್ತುವನ್ನ ಹಾರಾಜಿಗಿರಿಸುತ್ತಾರೆ. ಹೀಗೆ ಫುಟ್‍ಬಾಲ್‍ನಂತಹ ಪ್ರಸಿದ್ಧ ಆಟದಲ್ಲಿ ವಲ್ರ್ಡ್ ಕಪ್ ಗೆದ್ದು ಬೀಗಿದ್ದ ತಂಡದ ಆಟಗಾರನ ಬೂಟ್ ಕೂಡ ಹಾರಾಜಿಗಿರಿಸಲಾಗಿತ್ತು.

2018ರ ಫೀಫಾ ಕಪ್ ತನ್ನದಾಗಿಸಿಕೊಂಡಿದ್ದ ಪಾಲ್ ಪೋಗ್ಬಾನರ ಶೂ ಇದೀಗ ದಾಖಲೆಯ ಮೊತ್ತಕ್ಕೆ ಹರಾಜಾಗಿದೆ. ಸುಮಾರು 30 ಸಾವಿರ ಯೂರೋಗೆ ಅಂದ್ರೆ ಸುಮಾರು 23 ಲಕ್ಷದ 37ಸಾವಿರ ರೂಪಾಯಿಗೆ ಶೂ ಹರಾಜಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಮ್ಯಾಂಚೆಸ್ಟರ್ ಯುನೈಟೆಡ್ ಹಾಗೂ ಕ್ರೂವೇಷಿಯಾ ತಂಡದ ನಡುವಿನ ಪಂದ್ಯದಲ್ಲಿ ಪಾಲ್ 3ನೇ ಗೋಲು ದಾಖಲಿಸುವ ಮೂಲಕ ತನ್ನ ತಂಡಕ್ಕೆ ಜಯ ತಂದುಕೊಟ್ಟಿದ್ದರು. ಇದೇ ರೀತಿ ಕ್ಲಬ್ ಲೆವೆಲ್‍ನಲ್ಲಿ ಆಡುವಾಗಲೂ ಪಾಲ್ ತಮ್ಮ ಟೀ ಶರ್ಟ್ ಹರಾಜಿಗಿಟ್ಟಿದ್ದರು. ಆಗ ಅದು ಕೇವಲ 40 ಯೂರೋಗೆ ಹರಾಜಾಗಿತ್ತು.

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು, ಹರಾಜಿನಿಂದ ಬಂದ ಹಣವನ್ನ ಗ್ರಾಮೀಣ ಪ್ರದೇಶಗಳ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸಹಾಯ ಮಾಡುವ ಫ್ರಂಚ್ ಚಾರಿಟಿಗೆ ನೀಡಿ ಸಮಾಜಮುಖಿ ಕಾರ್ಯದಲ್ಲಿ ಪಾಲ್ ಕೂಡ ಪಾಲುದಾರನಾಗಿದ್ದಾರೆ.