Monday, January 20, 2025
ಸುದ್ದಿ

ಪ್ಲೇಸ್ಟೋರಲ್ಲಿ ಇದೀಗ ಟಿಕ್ ಟಾಕ್ ಆ್ಯಪ್ ಲಭ್ಯ: ಎಷ್ಟೋ ಅಡೆತಡೆಗಳನ್ನು ಎದುರಿಸಿ ಗೆದ್ದ ಟಿಕ್ ಟಾಕ್ – ಕಹಳೆ ನ್ಯೂಸ್

ಕೆಲದಿನಗಳ ಹಿಂದೆ ದೇಶದಾದ್ಯಂತ ಟಿಕ್ ಟಾಕ್ ಆ್ಯಪ್ ಬ್ಯಾನ್ ಆಗಿ ದೊಡ್ಡ ಸುದ್ದಿಯಾಗಿತ್ತು. ಕೆಲವೊಂದಿಷ್ಟು ಟಿಕ್ ಟಾಕ್ ಬಳಕೆದಾರರಿಂದ ಸಾಮಾಜಿಕವಾಗಿ ಸಮಸ್ಯೆಯಾಗಿತ್ತು. ಇನ್ನೂ ಕೆಲವು ಮಂದಿ ಕಮೆಂಟ್ಸ್‍ಗಳಿಗೆ ಬೇಸತ್ತು ಪೊಲೀಸರ ಮೊರೆ ಹೋಗಿದ್ದರು.

ಈ ಎಲ್ಲಾ ಕಾರಣದಿಂದ ಪ್ಲೇಸ್ಟೋರಿನಿಂದ ಟಿಕ್ ಟಾಕ್ ಆ್ಯಪ್ ನ್ನು ಗೂಗಲ್‍ನಿಂದ ತೆಗೆಯಲಾಗಿತ್ತು. ಇದರಿಂದಾಗಿ ಟಿಕ್‍ಟಾಕ್ ಬಳಕೆದಾರರಿಗೆ ಬೇಸರವಾಗಿತ್ತು. ಆದರೆ ಇದೀಗ ಟಿಕ್ ಟಾಕ್ ಬಳಕೆದಾರರಿಗೆ ಒಂದು ಖುಷಿಯ ಸುದ್ದಿಯೊಂದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಟಿಕ್ ಟಾಕ್ ಆ್ಯಪಿಗೆ ಕಂಟಕವಾಗಿದ್ದ ಕೆಲವೊಂದಿಷ್ಟು ಸಮಸ್ಯೆಗಳು ಇದೀಗ ಸಂಪೂರ್ಣವಾಗಿ ಪರಿಹಾರವಾಗಿದ್ದು ಪ್ಲೇಸ್ಟೋರಲ್ಲಿ ಟಿಕ್‍ಟಾಕ್ ಆ್ಯಪ್ ಲಭ್ಯವಿರಲಿದೆ. ಹೊಸ ರೂಪದಲ್ಲಿ ಬಂದಿರುವ ಟಿಕ್‍ಟಾಕ್ ಆ್ಯಪ್‍ಗೆ ಇದೀಗ ಭಾರೀ ಡಿಮ್ಯಾಂಡ್. ಆ್ಯಪ್ ನಿಷೇದ ಸುದ್ದಿ ಕೇಳಿ ಖುಷಿಯಾಗಿದ್ದ ಮಂದಿಗೆ ಈ ಸುದ್ದಿ ಕೇಳಿ ಅಕ್ಷರಶಃ ತಲೆ ಮೇಲೆ ಬಿಸಿ ತುಪ್ಪ ಸುರಿದಂತಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು