Saturday, November 23, 2024
ಸುದ್ದಿ

ನಾಳೆಯಿಂದ ಸಿಮ್ ಖರೀದಿ ನಿಯಮ ಬದಲು – ಕಹಳೆ ನ್ಯೂಸ್

ಸಿಮ್ ಕಾರ್ಡ್ ಖರೀದಿಗೆ ಆಧಾರ್ ಕಾರ್ಡ್ ಕಡ್ಡಾಯವಲ್ಲ ಎಂದು ಸುಪ್ರೀಂ ತೀರ್ಪು ನೀಡಿದ ನಂತರ ಇದೀಗ ಸಿಮ್ ಖರೀದಿಯ ನಿಯಮಗಳೂ ಬದಲಾಗಿವೆ. ಮೇ 1 ಅಂದರೆ ನಾಳೆಯಿಂದ ಹೊಸ ನಿಯಮ ಜಾರಿಗೆ ಬರಲಿದ್ದು, ಅದರಂತೆ ಗ್ರಾಹಕರು ಸಿಮ್ ಖರೀದಿ ಮಾಡುವಾಗ ಆಧಾರ್ ನೀಡಬೇಕಾಗಿಲ್ಲ ಬದಲಾಗಿ ಸಂಪೂರ್ಣ ಡಿಜಿಟಲೀಕೃತವಾಗಿಯೇ ಖರೀದಿ ಕ್ರಮ ನಡೆಯಲಿದೆ. ಮೊಬೈಲ್ ಅಪ್ಲಿಕೇಷನ್‍ನಲ್ಲಿ ಗ್ರಾಹಕನ ಹೆಸರು ಮತ್ತು ವಿಳಾಸವನ್ನು ನಮೂದಿಸಲಾಗುತ್ತದೆ.

ಸಿಮ್ ಒದಗಿಸುವವರು ಮಳಿಗೆಯಲ್ಲೇ ಗ್ರಾಹಕಕರ ಲೈವ್ ಫೊಟೋವನ್ನು ಕ್ಲಿಕ್ಕಿಸಿಕೊಳ್ಳುತ್ತಾರೆ. ನಂತರ ಬೆರಳಚ್ಚನ್ನು ಪಡೆದು ಮುಖದ ಧೃಡೀಕರಣವಾದ ಬಳಿಕ, ಗ್ರಾಹಕರು ಪಡೆದ ಸಿಮ್ ಕಾರ್ಡ್ ಅನ್ನು ವೇರಿಫಿಕೇಷನ್ ಮಾಡಿದ 2 ಗಂಟೆ ಒಳಗಾಗಿ ಸಿಮ್ ಕೆಲಸ ಮಾಡಲು ಶುರು ಮಾಡಲಿದೆ. ಪ್ರಸ್ತುತ ಒಂದು ವಿಳಾಸ ಧೃಡೀಕೃತ ಐಡಿ ಮೂಲಕ ಒಟ್ಟು 9 ಸಿಮ್ ಪಡೆಯಬಹುದಾಗಿದ್ದು, ಒಂದು ದಿನದಲ್ಲಿ 2 ಸಿಮ್ ಕಾರ್ಡ್ ಪಡೆಯಬಹುದಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು