Tuesday, January 21, 2025
ಸುದ್ದಿ

ಕವಲುದಾರಿ ರೀಮೇಕ್‍ಗೆ ಹೆಚ್ಚಿದ ಬೇಡಿಕೆ – ಕಹಳೆ ನ್ಯೂಸ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಿರ್ಮಾಣದ ಪಿ.ಆರ್.ಕೆ ಬ್ಯಾನರ್ ನ  ಚೊಚ್ಚಲ ಸಿನಿಮಾ ‘ಕವಲುದಾರಿ’ ತೆರೆಕಂಡು ಭರ್ಜರಿ ಕಲೆಕ್ಷನ್ ಮಾಡ್ತಿದೆ. ವಿಭಿನ್ನ ಕಥಾಹಂದರವುಳ್ಳ ಸಸ್ಪೆನ್ಸ್ ಕಂ ಥ್ರಿಲ್ಲರ್ ಕಥೆಗೆ ಪ್ರೇಕ್ಷಕ ಪ್ರಭುಗಳು ಜೈ ಅಂದಿದ್ದಾರೆ.

ಇದೀಗ ಚಿತ್ರಕ್ಕೆ ಬಾಲಿವುಡ್ ಸೇರಿದಂತೆ ತಮಿಳು, ತೆಲುಗು ಭಾಷೆಯಿಂದಲೂ ರೀಮೇಕ್ ಹಕ್ಕಿಗೆ ಭಾರೀ ಡಿಮ್ಯಾಂಡ್ ಕೇಳಿ ಬರುತ್ತಿದೆ. ಮರ್ಡರ್ ಕಂ ಮಿಸ್ಟರಿ ಕಥೆಯುಳ್ಳ ಚಿತ್ರದಲ್ಲಿ ನಟ ರಿಷಿ ಟ್ರಾಫಿಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡ್ರೆ, ನಿವೃತ್ತ ಪೊಲೀಸ್ ಅಧಿಕಾರಿಯಾಗಿ ನಟ ಅನಂತ್‍ನಾಗ್ ಮುತ್ತಣ್ಣನ ಪಾತ್ರದಲ್ಲಿ ನಟಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಒಂದು ಕೊಲೆಯ ಸುತ್ತಾ ನಡೆಯುವ ಸತ್ಯ ಮತ್ತು ಸುಳ್ಳಿನ ನಿಗೂಢ ಕಥೆಯನ್ನು ಚಿತ್ರ ಒಳಗೊಂಡಿದ್ದು, ಹೇಮಂತ್ ರಾವ್ ಕಥೆಯನ್ನು ಅದ್ಭುತವಾಗಿ ಕಟ್ಟಿಕೊಟ್ಟಿದ್ದಾರೆ. ಚಿತ್ರ ಈಗಾಗಲೇ ವಿದೇಶದಲ್ಲೂ ಹಲವು ಸೆಂಟರ್‍ಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು ಇದೀಗ ಚಿತ್ರಕ್ಕೆ ಪರಭಾಷೆಯಿಂದ ಡಿಮ್ಯಾಂಡ್ ಕೇಳಿ ಬರುತ್ತಿರುವುದು ಚಿತ್ರತಂಡದಲ್ಲಿ ಸಂತಸ ತಂದಿದೆ. ಇನ್ನು ಚಿತ್ರದಲ್ಲಿ ಅಚ್ಯುತ್ ಕುಮಾರ್, ರೋಷಿನಿ ಪ್ರಕಾಶ್, ಸುಮನ್ ರಂಗನಾಥ್ ಸೇರಿದಂತೆ ಹಲವು ಮಂದಿ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡು ಅದ್ಭುತವಾಗಿ ನಟಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು