ಭಾರತೀಯ ಚಿತ್ರರಂಗದಲ್ಲೀಗ ಅದರಲ್ಲೂ ಬಾಲಿವುಡ್‍ನಲ್ಲಿ ಬಯೋಪಿಕ್ ಚಿತ್ರಗಳದ್ದೇ ಅಬ್ಬರ, ಕ್ರೀಡಾಪಟುಗಳ, ಸಿನೆಮಾ ತಾರೆಯರ, ರಾಜಕೀಯ ನಾಯಕರ, ಐತಿಹಾಸಿಕ ಮಹಾಪುರುಷರ ಜೀವನ ಚರಿತ್ರೆಗಳನ್ನು ಸಿನೆಮಾ ಮಾಡುವ ಕ್ರೇಜ್ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಅಂತೆಯೇ ಇದೀಗ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರರಲ್ಲಿ ಒಬ್ಬರಾದ ಉಧಮ್ ಸಿಂಗ್ ಬಗೆಗಿನ ಸಿನೆಮಾವು ಸೆಟ್ಟೇರಿದ್ದು, ಚಿತ್ರಕ್ಕೆ ‘ಸರ್ದಾರ್ ಉಧಮ್ ಸಿಂಗ್’ ಎಂದು ಹೆಸರಿಡಲಾಗಿದೆ.
ಸ್ವಾತಂತ್ರ್ಯ ಹೋರಾಟ ಸಂದರ್ಭದಲ್ಲಿ ಪಂಜಾಬ್‍ನ ಜಲಿಯನ್‍ವಾಲಾ ಭಾಗ್ ಹತ್ಯಾಕಾಂಡದ ರುವಾರಿ ಜನರಲ್ ಡಯರ್ ಅನ್ನು ಅವನ ದೇಶ ಇಂಗ್ಲೆಂಡ್‍ಗೆ ಹೋಗಿ ಸಂಹಾರ ಮಾಡಿದ ವೀರನ ಕಥೆಯೇ ‘ಸರ್ದಾರ್ ಉಧಮ್ ಸಿಂಗ್’.
ಇನ್ನು ಈ ಕೆಚ್ಚೆದೆಯ ಪಾತ್ರವನ್ನು ಮಡುತ್ತಿರುವುದು ‘ಉರಿ’ ಬ್ಲಾಕ್‍ಬಸ್ಟರ್ ಸಿನೆಮಾ ಮೂಲಕ ದೇಶದಾದ್ಯಂತ ಹೊಸ ಸ್ಟಾರ್ ಆಗಿ ಹೊರಹೊಮ್ಮಿದ ಪ್ರತಿಭಾನ್ವಿತ ವಿಕ್ಕಿ ಕೌಶಲ್. ಈ ಚಿತ್ರವನ್ನು ನಿರ್ದೇಶಿಸುತ್ತಿರುವುದು ‘ಮದ್ರಾಸ್ ಕೆಫೆ’ ಖ್ಯಾತಿಯ ಸೂಜಿತ್ ಸರ್ಕಾರ್. ಚಿತ್ರೀಕರಣ ಈಗಾಗಲೇ ಪ್ರಾರಂಭವಾಗಿದ್ದು 2020ಕ್ಕೆ ಬಿಡುಗಡೆಯಾಗಲಿದೆ.