ಬೆಳಗಾವಿ : ಸೃಜನಶೀಲ ಸಾಹಿತ್ಯ ಬಳಗದವರು ಆಯೋಜಿಸಿದ್ದ ರಾಜ್ಯ ಘಟಕದ ವಾರ್ಷಿಕೋತ್ಸವ ಮತ್ತು ರಾಜ್ಯ ಮಟ್ಟದ ಸಾಹಿತ್ಯಿಗಳ ಕವಿಗೋಷ್ಠಿ ಕಾರ್ಯಕ್ರಮವು ಕುಂದರನಾಡು ಬೆಳಗಾವಿಯ ಹಳ್ಳಿಗಾಡಿನ ಸುಂದರ ಪಕೃತಿಯ ಮಡಿಲು ಹುಕ್ಕೇರಿಯ ಪಾಶ್ಯಾಪುರದ ಉಜ್ಜೇಶ್ವರ ಸಂಸ್ಥಾನದಲ್ಲಿ ನಡೆಯಿತು.
ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಯುವ ಸಾಹಿತಿಗಳ ಬಳಗ ಸೃಜನಶೀಲ ಸಾಹಿತ್ಯ ಬಳಗವು ಯುವ ಸಾಹಿತಿಗಳನ್ನು ಒಗ್ಗುಡಿಸಿ, ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡವನ್ನು ಪರಿಚಯಿಸುವ ಕಾರ್ಯವನ್ನು ಮಾಡುತ್ತಿದೆ.
ಸಾಹಿತಿ, ಕವಯತ್ರಿ ಶಾಂತ ಕುಂಟಿನಿಯವರ ಕವಿತೆಗಳ ವಾಚನ ಮತ್ತು ಸನ್ಮಾನ :
ಸೃಜನಶೀಲ ಬಳಗದವರು ಆಯೋಜಿಸಿದ್ದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ದಕ್ಷಿಣಕನ್ನಡವನ್ನು ಪ್ರತಿನಿಧಿಸಿದ್ದ ಯುವ ಸಾಹಿತಿ ಕವಯತ್ರಿ ಶಾಂತ ಕುಂಟಿನಿಯವರ ಭಾಗವಹಿಸಿ, ಕವಿತೆಗಳ ವಾಚನ ಮಾಡಿದರು, ನಂತರ ನಡೆದ ಸಭೆಯಲ್ಲಿ ಉಜ್ಜೇಶ್ವರ ಸಂಸ್ಥಾನದ ಷಡಕ್ಷರ ಬ್ರಹ್ಮ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಖ್ಯಾತ ಚಲನಚಿತ್ರ ನಟಿ ಕುಮಾರಿ ಅಂಜಲಿ, ಬೆಂಗಳೂರು ರಾಜ್ಯ ಮಹಿಳಾ ಕಾಂಗ್ರೆಸ್ ಪ್ರಾ. ಕಾರ್ಯದರ್ಶಿ ಶ್ರೀದೇವಿ ಉತ್ಲಾಸರ, ಚಲನಚಿತ್ರ ನಟ ವೆಂಕಟೇಶ್ ಉಣಕಲ್ಲಕರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಪ್ರಕಾಶ್ ದೇಶಪಾಂಡೆ ವಹಿಸಿಕೊಂಡಿದ್ದರು.
ರಾಜ್ಯದ ಪ್ರಸಿದ್ಧ ಮುವತ್ತು ಕವಿಗಳು, ನೂರಾರು ಸಾಹಿತಿಗಳು, ಸಾವಿರಾರು ಸಾಹಿತ್ಯ ಪ್ರೇಮಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.