ಕರ್ನಾಟಕ ರಾಜ್ಯ ಸರ್ಕಾರ ನೀಡುವ ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಪಡೆದುಕೊಂಡು ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದವರ ಮೇಲೆ ಬಂಟ್ವಾಳ ನಗರ ಠಾಣಾ ಪೊಲೀಸರು ದಾಳಿ ನಡೆಸಿದ್ದಾರೆ.
ಬಂಟ್ವಾಳದ ಬಿ ಮೂಡ ಗ್ರಾಮದ ಗೂಡಿನಬಳಿ ಇರುವ ಅಬ್ದುಲ್ ಹಕೀಂರವರ ಬಾಬ್ತು ಕಟ್ಟಡದ ಬಳಿ ಹೋಗಿ ನೋಡಿ ದಾಳಿ ನಡೆಸಲಾಗಿದೆ. ದಾಳಿ ವೇಳೆ ಕಟ್ಟಡದ ಎದುರುಗಡೆ ಕೆಎಲ್ 14 ವಿ 4970 ನಂಬರ್ ಪಿಕಪ್ ವಾಹನ ಇದ್ದು ಇದರಲ್ಲಿ 50 ಕೆಜಿ ತೂಕದ 60 ಚೀಲಗಳು ಪತ್ತೆಯಾಗಿದೆ. ನಂತರ ಅಬ್ದುಲ್ ಸಲಾಂರನ್ನು ವಿಚಾರಿಸಲಾಗಿ, ಕಟ್ಟಡದ ಮಾಲಿಕರಾದ ಅಬ್ದುಲ್ ಹಕೀಂ ನೀಡಿದ ಅಕ್ಕಿಯನ್ನು ಹೇರಿದ್ದೇನೆ ಎಂದಿದ್ದಾನೆ.
ನಂತರ ಅಬ್ದುಲ್ ಹಕೀಂರನ್ನು ವಿಚಾರಿಸಿದಾಗ ಪಡಿತರ ಅಕ್ಕಿಯನ್ನು ಜನರಿಂದ ಕಡಿಮೆ ಬೆಲೆಗೆ ಪಡೆದುಕೊಂಡು ಹೆಚ್ಚಿನ ಬೆಲೆಗೆ ಮಾರಟ ಮಾಡುವುದಾಗಿ ತಿಳಿಸಿದ್ದಾರೆ. ಇವರಿಂದ 50 ಕೆಜಿ ತೂಕದ 60 ಚೀಲ, ಅಂಗಡಿಯಲ್ಲಿದ್ದ 50 ಕೆ.ಜಿ ತೂಕದ 27 ಬ್ಯಾಗ್, 40 ಕೆ.ಜಿ ತೂಕದ 28 ಬ್ಯಾಗ್, ತೂಕದ ಯಂತ್ರ, 2 ಹೊಲಿಗೆ ಯಂತ್ರ, ಹಾಗೂ ಕೆಎಲ್ 14 ವಿ 4970 ನಂಬರ್ ಪಿಕಪ್ ವಾಹನವನ್ನು ವಶ ಪಡಿಸಿಕೊಂಡಿದ್ದು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.