Monday, January 20, 2025
ಸುದ್ದಿ

ವಿಳಾಸ ಹುಡುಕಿಕೊಂಡು ಆಟೋ ಹತ್ತಿದ ನಾಗರಾಜ..! – ಕಹಳೆ ನ್ಯೂಸ್

ಮೈಸೂರು: ಬಿಸಿಲ ಬೇಗೆಯಿಂದ ಬಸವಳಿದ ನಾಗರ ಹಾವೊಂದು ಆಟೋದಲ್ಲಿ ಹತ್ತಿದ ಘಟನೆ ನಗರದಲ್ಲಿ ನಡೆದಿದೆ. ಬೇಸಿಗೆಯಲ್ಲಿ ತಾಪಮಾನ ಹೆಚ್ಚಾಗಿರುವ ಕಾರಣ ಪೊಟರೆ, ಪೊದೆಗಳಿಂದ ಹಾವುಗಳು ಹೊರಬರುತ್ತಿವೆ. ಇತ್ತೀಚೆಗಂತೂ ಕಾರು, ಸ್ಕೂಟರ್, ಆಟೋಗಳಲ್ಲಿ ಪತ್ತೆಯಾಗುತ್ತಿವೆ. ನಗರ ಪೊಲೀಸ್ ಆಯುಕ್ತರ ನಿವಾಸದ ಹಿಂಭಾಗದ ರಸ್ತೆಯಲ್ಲಿ ಆಟೋ ಚಾಲಕರೊಬ್ಬರು ಆಟೋ ನಿಲ್ಲಿಸಿ ಬಹಿರ್ದೆಸೆಗೆ ತೆರಳಿದ್ದರು.

ಈ ವೇಳೆ ನಾಗರ ಹಾವೊಂದು ಆಟೋ ಹತ್ತಿ ಕುಳಿತಿದೆ. ಆಟೋ ಚಾಲಕ ವಾಪಸ್ ಬಂದಾಗ, ಹಾವು ನೋಡಿ ದಂಗಾಗಿದ್ದಾರೆ. ಬಳಿಕ ಉರಗ ತಜ್ಞ ಸ್ನೇಕ್ ಶ್ಯಾಮ್‍ಗೆ ಕರೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಮಿಸಿದ ಸ್ನೇಕ್ ಶ್ಯಾಮ್ ಹಾವನ್ನ ರಕ್ಷಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು