Monday, January 20, 2025
ಸುದ್ದಿ

ಬೆಂಗಳೂರಿನ ಮನೆಯೊಂದರಲ್ಲಿ ಮಾದಕ ವಸ್ತು ಪತ್ತೆ : ಪೊಲೀಸರ ಅತಿಥಿಯಾದ ಮಂಗಳೂರು ಮೂಲದ ಕುಟುಂಬ – ಕಹಳೆ ನ್ಯೂಸ್

ಬೆಂಗಳೂರಿನ ಮನೆಯೊಂದರಲ್ಲಿ ಮಂಗಳೂರು ಮೂಲದ ಕುಟುಂಬವೊಂದು ಮಾದಕ ವಸ್ತುಗಳನ್ನ ಸಂಗ್ರಹ ಮಾಡುತಿದ್ದ ಘಟನೆ ಬೆಳಕಿಗೆ ಬಂದಿದೆ. ಬೆಂಗಳೂರು ನಗರದಲ್ಲಿ ಎನ್‍ಸಿಬಿ- ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋದಿಂದ ಮನೆಯ ಮೇಲೆ ಬೃಹತ್ ದಾಳಿ ನಡೆದಿದೆ. 198ನೇ ವಾರ್ಡ್, ಹೆಮ್ಮಿಗೇಪುರದ, ರುಫ್ಲೆಕ್ಸ್ ಲೇಔಟ್‍ನ ಮನೆಯೊಂದರ ಮೇಲೆ ದಾಳಿ ನಡೆಸಿರೋ ಅಧಿಕಾರಿಗಳು ಸತತ 6 ಗಂಟೆ ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಬರೋಬ್ಬರಿ 27 ಕೆಜಿ ಕೆಟಮೈನ್ ಡ್ರಗ್ಸ್ ಪತ್ತೆಯಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಕಳೆದ 1 ವರ್ಷದಿಂದ ಈ ಬಾಡಿಗೆ ಮನೆಯಲ್ಲಿ ಮೂವರು ಮಕ್ಕಳು, ಪತಿ, ಪತ್ನಿ ಸೇರಿ ಐವರು ವಾಸವಾಗಿದ್ದರು. ಅಡುಗೆ ಕೊಣೆಯಲ್ಲಿಯೇ ಕೆಜಿಗಟ್ಟಲೆ ಮಾದಕ ವಸ್ತುಗಳನ್ನ ಸಂಗ್ರಹ ಮಾಡಿದ್ದರು. ವಾಸನೆ ಬರಬರಾದು ಅಂತ ಪ್ರತ್ಯೇಕ ಫ್ಯಾನ್ ವ್ಯವಸ್ಥೆ ಕೂಡ ಮಾಡಿದ್ದರು ಎನ್ನಲಾಗಿದೆ. ಬೆಳಗಿನ ಜಾವದ ಸಮಯದಲ್ಲಿ ಬ್ಯಾರಲ್‍ಗಳು ಪಾರ್ಸಲ್ ಆಗ್ತಿದ್ದಾಗಿ ಮಾಹಿತಿ ಸಿಕ್ಕಿದೆ. ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು