Saturday, November 23, 2024
ಸಿನಿಮಾಸುದ್ದಿ

ಹಿರಿಯಣ್ಣನಾದ ಹಿರಣ್ಣಯ್ಯ ವಿಧಿವಶ ; ಮೌನವಾದ ರಂಗಭೂಮಿ – ಕಹಳೆ ನ್ಯೂಸ್

ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ವಿಧಿವಶರಾಗಿದ್ದಾರೆ. ಇಂದು ಬೆಳಗಿನ ಜಾವ ತಮ್ಮ ಸ್ವಗ್ರಹದಲ್ಲಿ ಹಿರಣ್ಣಯ್ಯ ಕೊನೆಯುಸಿರೆಳೆದಿದ್ದು, ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮಾತಿನಲ್ಲೇ ಮೋಡಿ ಮಾಡುವ ಮಾಸ್ಟರ್ ಹಿರಣ್ಣಯ್ಯನವರು 15.02.1934ರಂದು ಮೈಸೂರಿನಲ್ಲಿ ಹುಟ್ಟಿದ್ದರು. ಅವರ ಮೂಲ ಹೆಸರು ನರಸಿಂಹಮೂರ್ತಿ. ಕಲ್ಚರ್ಡ್ ಕಮೆಡಿಯನ್ ಎಂದು ಪ್ರಖ್ಯಾತರಾಗಿದ್ದ ಕೆ. ಹಿರಣ್ಣಯ್ಯ ಮತ್ತು ಶಾರದಮ್ಮ ದಂಪತಿಗಳ ಒಬ್ಬನೇ ಮಗ. ಓದಿದ್ದು ಇಂಟರ್ ಮೀಡಿಯೆಟ್‍ವರೆಗೆ. 1952ರಲ್ಲಿ ತಂದೆಯೊಂದಿಗೆ ಕೂಡಿಕೊಂಡು ಅವರಿಂದಲೇ ರಂಗಶಿಕ್ಷಣ ಪಡೆದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಶಾಲೆಗೆ ಸೇರಿ ಕಲಿತದ್ದು ತಮಿಳು, ತೆಲುಗು ಮತ್ತು ಇಂಗ್ಲಿಷ್ ಭಾಷೆಗಳು. ಅದರೆ ಕನ್ನಡದ ಬಾಯಿಪಾಠ. ಸ್ತೋತ್ರ ಪಾಠಗಳು ತಂದೆಯಿಂದ ಕರಗತ ಮಾಡಿಕೊಂಡಿದ್ದರು. ಮೈಸೂರಿಗೆ ಬಂದು ಬನುಮಯ್ಯ ಮಾಧ್ಯಮಿಕ ಶಾಲೆ ಸೇರಿದ್ದರು. ಓದುತ್ತಲೇ ಸಂಪಾದನೆಯ ದಾರಿ ಹಿಡಿದಿದ್ರು. ಸಂಪಾದನೆಗಾಗಿ ಸಾಧ್ವಿ, ಮೈಸೂರು ಪತ್ರಿಕೆಯ ಮಾರಾಟ ಮಾಡಿ ಶಾಲೆಯ ಫೀಸಿಗೆ ಹೊಂದಿಸುತ್ತಿದ್ದರು.

ಮುಂದೆ ಸೇರಿದ್ದು ಇಂಟರ್ ಮೀಡಿಯೆಟ್ ಕಾಲೇಜಿಗಾಗಿ ಶಾರದಾವಿಲಾಸ ಕಾಲೇಜು. ತಂದೆ ಕೆ. ಹಿರಣ್ಣಯ್ಯನವರು 1940ರಲ್ಲಿ ರಚಿಸಿ, ನಿರ್ದೇಶಿಸಿದ ಚಲನಚಿತ್ರ ‘ವಾಣಿ’ಯಲ್ಲಿ ಬಾಲನಟನಾಗಿ ಪಾದಾರ್ಪಣ ಮಾಡಿದರು. ಆದ್ರೆ 1948ರಲ್ಲಿ ರಂಗಭೂಮಿಯಲ್ಲಿ ಚಿಕ್ಕ ಪಾತ್ರಮಾಡಲು ಹೋಗಿ ಸೋತಿ ಹೋಗಿದ್ದರು ಇದೇ ಛಲದಿಂದ ಕಾಲೇಜಿನಲ್ಲಿ ಸಂಘ ಕಟ್ಟಿ ‘ಆಗ್ರಹ’ ಎಂಬ ನಾಟಕ ಪ್ರದರ್ಶಿಸಿದ್ದರು.

ತಂದೆಯ ಮರಣದ ನಂತರ ಅ.ನ.ಕೃ. ಮತ್ತು ಮಿತ್ರರ ಸಹಾಯದಿಂದ ಸ್ಥಾಪಿಸಿದ ನಾಟಕ ಕಂಪನಿ. ಮುಂದೆ ಅನೇಕ ನಷ್ಟಗಳನ್ನು ಅನುಭವಿಸಬೇಕಾಗಿ ಬಂದಿತ್ತು, ಆದರು ಕುಗ್ಗದೇ ಪುನಃ ಆರಂಭಿಸಿದ್ದು ಹಿರಣ್ಣಯ್ಯ ಮಿತ್ರ ಮಂಡಲಿ. ಲಂಚಾವತಾರ ರಚಿಸಿ ಪ್ರಯೋಗ ಪ್ರಾರಂಭಿಸಿದರು. ಮುಂದೆ 1962ರಲ್ಲಿ ಮೈಸೂರು ಮಹಾರಾಜರಿಂದ ಸನ್ಮಾನ. ನಟರತ್ನಾಕರ ಬಿರುದು. ಜಯಚಾಮರಾಜೇಂದ್ರ ಒಡೆಯರ ಸಮ್ಮುಖದಲ್ಲಿ ಜಗನ್ಮೋಹಿನ ಅರಮನೆಯಲ್ಲಿ ನಾಟಕ. ನಂತರ ನಡುಬೀದಿ ನಾರಾಯಣದಲ್ಲಿ ತೀರ್ಥರೂಪುವಾಗಿ, ಭ್ರಷ್ಟಾಚಾರದಲ್ಲಿ ಧಫೇದಾರ್ ಮುರಾರಿಯಾಗಿ, ಸದಾರಮೆಯಲ್ಲಿ ಕಳ್ಳನಾಗಿ, ಆದಿಮೂರ್ತಿಯಾಗಿ, ಕಪಿಮುಷ್ಠಿಯಲ್ಲಿ ಜಾರ್ಜ್ ಆಗಿ, ಕಸ್ತೂರಿಯಾಗಿ, ಮಕ್ಮಲ್ ಟೋಪಿಯಲ್ಲಿ ನಾಣಿಯಾಗಿ, ಹೀಗೆ ಹಲವಾರು ನಾಟಕಗಳನ್ನು ರಂಗಕ್ಕೆ ತಂದು ಕೀರ್ತಿಗಳಿಸಿದ್ದರು. ಇಪ್ಪತ್ತೈದಕ್ಕೂ ಹೆಚ್ಚು ನಾಟಕಗಳನ್ನು ಬರೆದು ಪ್ರದರ್ಶಿಸಿ ಜಯಭೇರಿ ಬಾರಿಸಿದ್ದರು. ಇವರ ಪ್ರತಿ ನಾಟಕದಲ್ಲಿಯೂ ಸಮಾಜದ ಓರೆಕೋರೆಗಳನ್ನು ತಿದ್ದುವುದೇ ಪ್ರಮುಖ ವಸ್ತುವಾಗಿತ್ತು. ಹಲವಾರು ಬಾರಿ ವಿದೇಶದಲ್ಲೂ ನಾಟಕಗಳ ಪ್ರದರ್ಶನ ನೀಡಿ ಭೇಷ್ ಎನಿದಿಕೊಂಡಿದ್ದರು.

ಇವರಿಗೆ ಸಂದ ಪ್ರಶಸ್ತಿ ಗೌರವಗಳಿಗೆ ಲೆಕ್ಕವಿಲ್ಲ. ನಟರತ್ನಾಕರ, ಕಲಾಗಜಸಿಂಹ, ರಾಜ್ಯೋತ್ಸವ ಪ್ರಶಸ್ತಿ, ರಾಜ್ಯ ನಾಟಕ ಅಕಾಡಮಿ ಪ್ರಶಸ್ತಿ, ರಂಗಭೂಮಿ ಪ್ರಶಸ್ತಿ, ಗುಬ್ಬಿವೀರಣ್ಣ ಪ್ರಶಸ್ತಿ, ನೂಜೆರ್ಸಿ, ವಾಷಿಂಗ್‍ಟನ್ ಡಿ.ಸಿ., ಬಾಸ್ಟನ್, ಹೂಸ್ಟನ್, ನೂಯಾರ್ಕ್ ಮುಂತಾದೆಡೆಗಳಿಂದ ಸಂದ ಸನ್ಮಾನ, ನವರತ್ನಾರಾಂ ಪ್ರಶಸ್ತಿ, ಮದರಾಸು, ಹೈದರಾಬಾದು ಕನ್ನಡ ಸಂಘಗಳಿಂದ ಸನ್ಮಾನ ಲಭಿಸಿವೆ., ಎಲ್ಲ ನಾಟಗಗಳಿಗಿಂತಲೂ ಲಂಚಾವತಾರ ನಾಟಕವನ್ನು 10,000 ಪ್ರದರ್ಶನ ಮಾಡಿ ವಿಶ್ವ ದಾಖಲೆಯನ್ನೆ ಬರೆದಿದ್ದರು.

ಹೀಗೆ ರಂಗಭೂಮಿಯಲ್ಲಿ ಸಾಧನೆಯ ಶಿಖರವನ್ನೆರಿದ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ನಮ್ಮೆಲ್ಲರನ್ನ ಅಗಲಿದ್ದು, ಹಿರಿಯಣ್ಣ ಹಿರಣ್ಣಯ್ಯ ನಡೆದ ರಂಗವೇದಿಕೆ ಮೌನವಾಗಿದೆ.