ಪ್ರತಿಯೊಬ್ಬರಿಗೂ ತಮ್ಮ ಮನೆ ಅಂದವಾಗಿರಬೇಕು ಅನ್ನೊ ಅಸೇ ಇದ್ದೇ ಇರುತ್ತೆ ಅದರಲ್ಲೂ ಸ್ವಚ್ಚಂದವಾದ ವಾತವರಣದಲ್ಲಿ ಮನೆ ನಿರ್ಮಾಣವಾದರೆ ಹೆಚ್ಚು ಕುಶಿ ಇರುತ್ತೆ, ಆ ಆಸೆಗಲಿಗೆ ಇದೀಗ ಹೊಸ ಮೆರುಗು ನೀಡೋದಿಕ್ಕೆ ್ಲ ಆಸ್ಟ್ರೇಲಿಯಾ ಸಮುದ್ರದ ತಟದಲ್ಲಿ ಮನೆಯೊಂದನ್ನು ನಿರ್ಮಿಸಿದೆ.
ಹೌದು, ಆಸ್ಟ್ರೇಲಿಯಾದ ವಾಸ್ತುಶಿಲ್ಪಿ ತಜ್ಞರು ಸಮುದ್ರದ ದಂಡೆಯಲ್ಲಿರುವ ಬಂಡೆಗೆ ಹೊಂದಿಕೊಂಡಂತೆ ಮನೆಯನ್ನು ನಿರ್ಮಿಸಿದ್ದಾರೆ. ಸಮುದ್ರಕ್ಕೆ ಹತ್ತಿರವಾಗಿ ವಾಸಿಸಲು ಇಷ್ಟಪಡುವವರಿಗೆ ಈ ರೀತಿಯ ಮನೆ ನಿರ್ಮಿಸಲಾಗಿದೆ ಎಂದು ಹೇಳಲಾಗಿದೆ.
ಈ ಮನೆಯನ್ನು ಸಮುದ್ರದ ಬಂಡೆಗೆ ನೇತುಹಾಕಿದ ರೀತಿ ನಿರ್ಮಿಸಲಾಗಿದ್ದು, ಮೇಲಿನಿಂದ ಮನೆಯ ಬಳಗೆ ಪ್ರವೇಶ ಒದಗಿಸಲಾಗಿದೆ. ಲಂಬಾಕಾರವಾಗಿ ಮನೆ ನಿರ್ಮಾಣವಾಗಿರುವುದರಿಂದ, ಮನೆಯ ಕೋಣೆಗಳು ಒಂದರ ಕೆಳಗೆ ಒಂದು ಬರಲಿವೆ. ಇದಕ್ಕೆ ಲಿಫ್ಟ್ ಹಾಗೂ ಮೆಟ್ಟಿಲುಗಳನ್ಜು ಒದಗಿಸಲಾಗಿದೆ ಎಂದು ಹೇಳಲಾಗಿದೆ.
ಆಸ್ಟ್ರೇಲಿಯಾದ ಫ್ರಿಬರ್ಬ್ ಆರ್ಕಿಟೆಕ್ಚರ್ ಈ ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದು, ಕಡಿಮೆ ಫರ್ನಿಚರ್‌ಗಳನ್ನು ನೀಡಿದ್ದು ಸಮುದ್ರದ ಸೌಂದರ್ಯವನ್ನು ಸವಿಯಲು ಈ ರೀತಿ ಮಾಡಲಾಗಿದೆ. ಈ ಮೂಲಕ ಬಹು ಹತ್ತಿರದಿಂದ ಸಮುದ್ರದ ಸೌಂದರ್ಯವನ್ನ ಕಣ್ತುಂಬಿಕೊಳ್ಳಬಹುದಾಗಿದೆ.