Monday, January 20, 2025
ಸುದ್ದಿ

ಕತ್ತೆ ಮೇಲೆ ಸವಾರಿ ಮಾಡಿಕೊಂಡು ನಾಮಪತ್ರ ಸಲ್ಲಿಸಿದ ಸ್ವತಂತ್ರ ಅಭ್ಯರ್ಥಿ – ಕಹಳೆ ನ್ಯೂಸ್

ಪಾಟ್ನ : ಕತ್ತೆಯ ಮೇಲೆ ಸವಾರಿ ಮಾಡಿಕೊಂಡು ಬಂದು ವಿನೂತನವಾಗಿ ನಾಮಪತ್ರ ಸಲ್ಲಿಸಿದ ಘಟನೆ ಬಿಹಾರದ ಜೆಹಾನಾಬಾದ್‍ನಲ್ಲಿ ನಡೆದಿದೆ. ಸಾಮಾನ್ಯ ಜನರನ್ನು ರಾಜಕಾರಣಿಗಳು ಕತ್ತೆಗಳಂತೆ ಕಾಣುತ್ತಾರೆ ಎಂಬುದನ್ನು ತೋರಿಸುವ ಸಲುವಾಗಿ ಮಣಿಭೂಷಣ್ ಎಂಬುವವರು ಕತ್ತೆ ಏರಿ ಬಂದು ನಾಮಪತ್ರ ಸಲ್ಲಿಸಿದ್ದರು. ಆದರೆ ಚುನಾವಣಾ ಅಧಿಕಾರಿಗಳು ತಾಂತ್ರಿಕ ಕಾರಣವೊಡ್ಡಿ ನಾಮಪತ್ರ ತಿರಸ್ಕರಿಸಿದ್ದಾರೆ. ಇಷ್ಟು ಸಾಲದೆಂಬಂತೆ ಪ್ರಾಣಿಗಳ ಮೇಲೆ ಕ್ರೂರತೆ ಮೆರೆದ ಕಾರಣಕ್ಕಾಗಿ ಮಣಿಭೂಷಣ್ ಎಂಬ ಸ್ವತಂತ್ರ ಅಭ್ಯರ್ಥಿ ವಿರುದ್ಧ ಇದೀಗ ಪೊಲೀಸರು ಕೇಸು ದಾಖಲಿಸಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು