Recent Posts

Sunday, January 19, 2025
ಸುದ್ದಿ

ಯಕ್ಷಗಾನದಿಂದ ದೇಶಾಭಿಮಾನದತ್ತ ; ಯಕ್ಷಸೇನೆ | ಮುಂಬಯಿಯಲ್ಲಿ ಯಕ್ಷಕುವರಿಯರ ದಧಿಗಿಣ ; ರಾಧಾವಿಲಾಸ

 

ಮುಂಬಯಿ : ಯಕ್ಷಗಾನದಿಂದ ದೇಶಾಭಿಮಾನದತ್ತ ಎಂಬ ಶೀರ್ಶಿಕೆಯ ಅಡಿಯಲ್ಲಿ
ಮುಂಬಯಿಯಲ್ಲಿ
ಯಕ್ಷಸೇನೆ ತಂಡದ ಪ್ರಥಮ ವಾರ್ಷಿಕೋತ್ಸವ ವಿಭಿನ್ನ ಹಾಗೂ ವಿಶಿಷ್ಟವಾಗಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯಕ್ಷಗಾನ ಕರಾವಳಿಯ ಗಂಡುಕಲೆ, ದೇಶ ವಿದೇಶದಲ್ಲಿ ಮನ್ನಣೆ ಪಡೆದ ರಾಜ ಕಲೆ ಇದೀಗ ಆ ಕಲೆ ಕನಸಿನ ನಗರಿ ಮುಂಬಯಿಯಲ್ಲಿ ರಾಷ್ಟ್ರ ಸೇವೆಗೆ ನಾಂದಿಹಾಡುತ್ತಿದೆ. ಇದೇ ಬರುವ ಡಿಸೆಂಬರ್ 25 ರ ಸೋಮವಾರ ಮಧ್ಯಾಹ್ನ ಸಮಯ 2:30ಕ್ಕೆ ಸರಿಯಾಗಿ
ನವಮುಂಬಯಿಯ ” ಸಾಂಸ್ಕೃತಿಕ ಸೌರಭ ” ಎಂಬ ಕಾರ್ಯಕ್ರಮವು ಹೆಗ್ಗಡೆ ಭವನದಲ್ಲಿ ಜರುಗಲಿರುವುದು.ಈ
ಸಂದರ್ಭದಲ್ಲಿ ದೇಶಕಾಗಿ ಮಡಿದ ವೀರ ಯೋದ ದಿವಂಗತ ಹನುಮಂತಪ್ಪ ಕೊಪ್ಪದ್ ರವರಿಗೆ ಯಕ್ಷ ಸೇನೆ ಮರಣೋತ್ತರ ಶೌರ್ಯ ಪಶ್ರಸ್ತಿ ಹಾಗೂ ಯಕ್ಷ ನಿಧಿ ಸಮರ್ಪಣೆ ಹಾಗೂ 7ದಶಕಗಳ ಕಾಲ ಯಕ್ಷಗಾನ ಕ್ಷೇತ್ರದಲ್ಲಿ ರಂಜಿಸಿದ ಚಿಟ್ಟಾಣಿ ರಾಮಚಂದ್ರ ಹೆಗಡೆಯವರಿಗೆ ” ಯಕ್ಷ ಸೇನಾ ಪ್ರಶಸ್ತಿ ” ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಭಾರತಕ್ಕೆ ಚಿನ್ನದ ಪದಕ ವಿಜೇತ ಅಪುಲ್ಆಳ್ವ ಇರಾರವರಿಗೆ ” ಯಕ್ಷ ಸೇನಾ ಸಾಧಕ ಪ್ರಶಸ್ತಿ ” ನೀಡಿ ಗೌರವಿಸಲಿದೆ. ಸಾಂಸ್ಕೃತಿಕ ಕಾಯ೯ಕ್ರಮದ ಅಂಗವಾಗಿ ” ತ್ರಿವಳಿ ಸಂಗಮ ” ಗಾನ ವೈಭವ, ನಾಟ್ಯ ವೈಭವ, ರಸರಾಗ ವೈಭವ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಯಕ್ಷ ಸೋದರಿಯರ ಯಕ್ಷಾವಿಲಾಸ ‘ ರಾಧಾ ವಿಲಾಸ ‘ :

ದಕ್ಷಿಣ ಕನ್ನಡ ಜಿಲ್ಲೆಯ ನಂ.೧ ಮಹಿಳಾ ಯಕ್ಷಗಾನ ತಂಡ ಎಂಬ ಖ್ಯಾತಿಗೆ ಭಾಜನವಾದ ರಕ್ಷಿತ್ ಪಡ್ರೆಯವರ ನಿರ್ದೇಶನದ ಸಿದ್ದಿವಿನಾಯಕ ನಾಟ್ಯಕಲಾಕೇಂದ್ರದ ಬಹುಬೇಡಿಕೆಯ ಮತ್ತು ಹತ್ತಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡ ಯಕ್ಷ ಸೋದರಿಯರಾದ ಡಾ ವರ್ಷಾ ಶೆಟ್ಟಿ ಮತ್ತು ಕು. ದಿಶಾ ಶೆಟ್ಟಿಯವರು ರಾಧಾ ವಿಲಾಸ ಕಾರ್ಯಕ್ರವನ್ನು ಪ್ರಪಥಮ ಬಾರಿಗೆ ಮುಂಬಯಿಯಲ್ಲಿ ಪ್ರದರ್ಶನ ನೀಡಲಿದ್ದಾರೆ.

ಯಕ್ಷಗಾನ ಕಾರ್ಯಕ್ರಮದಲ್ಲಿ ಪಟ್ಲ, ಕಕ್ಕೆಪದವು, ಜನ್ಸಾಲೆ ಸೇರಿದಂತೆ ಹತ್ತಾರು ಕಲಾವಿದರು ಭಾಗವಹಿಸಲಿದ್ದಾರೆ.

Leave a Response