Saturday, September 21, 2024
ಸುದ್ದಿ

ಒಡಿಶಾದ ಹತ್ತಿರ ಬಂದೇ ಬಿಡ್ತು ಫ್ಯಾನಿ ಸೈಕ್ಲೋನ್, ಎಚ್ಚರವಾಗಿರಿ – ಕಹಳೆ ನ್ಯೂಸ್

ಒಡಿಶಾ :ಫ್ಯಾನಿ ಚಂಡಮಾರುತ ಕೆಲವೇ ಗಂಟೆಗಳಲ್ಲಿ ಒಡಿಶಾ ಪ್ರವೇಶಿಸಲಿದೆ. ಭಾರತೀಯ ಹವಾಮಾನ ಇಲಾಖೆ ಮಾಹಿತಿ ಪ್ರಕಾರ ಮಾರುತ ಗಾಳಿಯು ಒಡಿಶಾದ ಪುರಿ ಇಂದ ಕೇವಲ 500 ಕಿ.ಮೀ ದೂರದಲ್ಲಿದೆ ಎಂದು ತಿಳಿದುಬಂದಿದೆ.

ಶುಕ್ರವಾರದ ಹೊತ್ತಿಗೆ ಭಾರಿ ಚಂಡಮಾರುತ ಒಡಿಶಾಕ್ಕೆ ಬಂದು ಅಪ್ಪಳಿಸಲಿದೆ. ಗಾಳಿಯು 200 ಕೆಎಂಪಿಎಚ್ ವೇಗದಲ್ಲಿ ಬೀಸುತ್ತಿದೆ. ಇದು ಅತಿ ಹೆಚ್ಚು ಮಳೆಯನ್ನು ಹೊತ್ತು ಬರುವ ಸಾದ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ. ಒಡಿಶಾದೆಲ್ಲೆಡೆ ಆರೇಂಜ್ ಅಲರ್ಟ್ ಘೋಷಿಸಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಚಂಡಮಾರುತಗಳನ್ನು ಬರಮಾಡಿಕೊಳ್ಳಲು ಸಿದ್ಧತೆಯೂ ಆರಂಭಗೊಂಡಿದೆ.
ರೆಡ್, ಆರೇಂಜ್, ಯೆಲ್ಲೋ ಅಲರ್ಟ್ ಎಂದರೇನು?
ಯೆಲ್ಲೋ ಅಲರ್ಟ್: ಯೆಲ್ಲೋ ವಾರ್ನಿಂಗ್ ಎಂದರೆ ಇದು ಆರೇಂಜ್ ವಾರ್ನಿಂಗ್ ಗಿಂತ ಕಡಿಮೆ ಪ್ರಮಾಣದ್ದಾಗಿದೆ. ಮಳೆ ಬರುವ ಸಂಭವವಿದೆ ಎಚ್ಚೆತ್ತುಕೊಳ್ಳಿ ಎಂದಷ್ಟೇ ತಿಳಿಸುತ್ತದೆ. ಈ ಅಲರ್ಟ್ ಇದ್ದರೆ ಜನರಿಗೆ ಹೆಚ್ಚು ಪ್ರಮಾಣದ ತೊಂದರೆಯಾಗುವುದಿಲ್ಲ ಎನ್ನುವ ಅರ್ಥ ನೀಡುತ್ತದೆ.

ಜಾಹೀರಾತು

ಆರೇಂಜ್ ಅಲರ್ಟ್: ಆರೇಂಜ್ ಅಲರ್ಟ್ ಎನ್ನುವುದು ರೆಡ್ ಅಲರ್ಟ್‍ಗಿಂತ ಹಿಂದಿನ ಒಂದು ಹೆಜ್ಜೆಯಾಗಿದೆ. ಹೆಚ್ಚಿನ ಮಳೆಯಾಗುವ ಸಂಭವವಿದೆ ಎಚ್ಚೆತ್ತುಕೊಳ್ಳಿ, ಮುಂಜಾಗ್ರತಾ ಕ್ರಮಗಳನ್ನು ಏನೇನು ಕೈಗೊಳ್ಳಬೇಕು ಎನ್ನುವ ಕುರಿತು ನಿರ್ಧಾರ ಮಾಡಿ, ಇನ್ನೇನು ಕೆಲವೇ ಗಂಟೆಗಳಲ್ಲಿ ಮಳೆ ಬರಲಿದೆ ಎನ್ನುವ ಎಚ್ಚರಿಕೆ ನೀಡುತ್ತದೆ.

ರೆಡ್ ವೆದರ್ ಅಲರ್ಟ್: ರೆಡ್ ಅಲರ್ಟ್ ಎಂದಾಕ್ಷಣ ರೆಡ್-ಕೆಂಪು ಎನ್ನುವ ಹೆಸರೇ ಸೂಚಿಸುವಂತೆ ಡೇಂಜರ್ ಎನ್ನುವ ಸೂಚನೆಯನ್ನು ನೀಡುತ್ತದೆ. ತಕ್ಷಣವೇ ರಕ್ಷಣಾ ಕ್ರಮ ಕೈಗೊಳ್ಳುವಂತೆ ನೀಡುವ ಎಚ್ಚರಿಕೆ, ಒಂದೊಮ್ಮೆ ಜನರು ಉಳಿದುಕೊಂಡಿರುವ ಜಾಗ ಅಷ್ಟು ಸುರಕ್ಷಿತವಾಗಿರುವುದಿಲ್ಲ, ಮಳೆ ಬಂದೇ ಬರುತ್ತದೆ ಎಂಬ ಖಾತ್ರಿ ಇರುತ್ತದೆ ಆಗ ಒಂದೆಡೆಯಿಂದ ಮತ್ತೊಂದು ಸುರಕ್ಷಿತ ಜಾಗಕ್ಕೆ ತೆರಳುವುದು, ಮಳೆಯಿಂದ ಬಚಾವಾಗುವುದು ಹೇಗೆ ಎನ್ನುವ ಕುರಿತು ಎಚ್ಚರಿಕೆ ನೀಡಲಾಗುತ್ತದೆ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗುತ್ತದೆ. ಸಾರ್ವಜನಿಕ ಸಾರಿಗೆ ಸಂಪರ್ಕವನ್ನು ಕಡಿತಗೊಳಿಸಲಾಗುತ್ತದೆ.

ಒಡಿಶಾದ ಎಲ್ಲೆಲ್ಲಿ ಮಳೆ ಸಂಭವ
ಗಜಪತಿ, ಗಂಜಂ, ಪುರಿ, ಖೋರ್ಧಾ, ಕೋರಪಟ್, ರಾಯಗಡದಲ್ಲಿ ಗುರುವಾರ ಮಳೆಯಾಗುವ ಸಂಭವವಿದೆ.
ಚಂಡಮಾರುತ ತೀವ್ರತೆಯನ್ನು ನೋಡಿ ರೆಡ್ ಅಲರ್ಟ್ ಘೋಷಣೆ ಮಾಡಲಾಗುತ್ತದೆ. ಪುರಿ,ಧೆಂಕನಲ್, ಅಂಗುಲ್, ಮಯೂರ್‍ಭಾಜ್ ಜಿಲ್ಲೆಗಳಲ್ಲಿ ಶುಕ್ರವಾರ ರೆಡ್ ಅಲರ್ಟ್ ಘೋಷಿಸಲಾಗುತ್ತದೆ.

ಕರಾವಳಿ ಜಿಲ್ಲೆಗಳಾದ ಪಶ್ಚಿಮ ಬಂಗಾಳ, ಆಂಧ್ರಪ್ರದೇಶದಲ್ಲಿ ಮುಂದಿನ ಎರಡರಿಂದ ಮೂರು ದಿನ ಹೈ ಅಲರ್ಟ್ ಘೋಷಿಸಲಾಗಿದೆ.
ನೌಕಾಪಡೆ, ಕೋಸ್ಟ್‍ಗಾರ್ಡ್,ಎನ್‍ಡಿಆರ್‍ಎಫ್ ಸಿಬ್ಬಂದಿಗಳು
ಭಾರತೀಯ ನೌಕಾಪಡೆ ಹಾಗೂ ಭಾರತೀಯ ಕೋಸ್ಟ್ ಗಾರ್ಡ್, ಎನ್‍ಡಿಆರ್‍ಎಫ್ ಸಿಬ್ಬಂದಿಗಳು ಕೂಡ ರಕ್ಷಣಾ ಕಾರ್ಯಕ್ಕೆ ಸಿದ್ಧರಾಗಿದ್ದಾರೆ.
ಒಡಿಶಾದ 11 ಜಿಲ್ಲೆಗಳಲ್ಲಿ ಚುನಾವಣಾ ನೀತಿ ಸಂಹಿತೆ ವಾಪಸ್
ಮೇ 15ರವರೆಗೆ ಆರೋಗ್ಯ ಅಧಿಕಾರಿಗಳು, ವೈದ್ಯರ ರಜೆಯನ್ನು ಕಡಿತಗೊಳಿಸಿದ್ದಾರೆ. ಹಾಗೆಯೇ ಎಲ್ಲಾ ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. 11 ರಾಜ್ಯಗಳಲ್ಲಿದ್ದ ಚುನಾವಣಾ ನೀತಿ ಸಂಹಿತೆಯನ್ನು ಕೂಡ ಹಿಂಪಡೆಯಲಾಗಿದೆ. ಮೀನುಗಾರರು ಸಮುದ್ರಕ್ಕಿಳಿಯದಂತೆ ಎಚ್ಚರಿಕೆ ನೀಡಲಾಗಿದೆ.