Monday, January 20, 2025
ಸುದ್ದಿ

ರೈಲ್ವೆ ಕ್ರಾಸ್ ನ್ನು ರೈಲ್ವೆ ಇಲಾಖೆ ಯವರು ಯಾವುದೇ ಪೂರ್ವ ಮಾಹಿತಿ ನೀಡದೆ ಬಂದ್  ಹಿನ್ನಲೆ: ರೈಲ್ವೆ ಲೆವೆಲ್ ಕ್ರಾಸ್‍ನ ಬಳಿ ಪ್ರತಿಭಟನೆ – ಕಹಳೆ ನ್ಯೂಸ್

ಬಂಟ್ವಾಳ: ಪರಂಗಿಪೇಟೆ ಕುಂಪಣಮಜಲು ನಿಂದ ಮೇರೆಮಜಲು ಬಜಪೆ ಸಂಪರ್ಕ ದ ರೈಲ್ವೆ ಕ್ರಾಸ್ ನ್ನು ರೈಲ್ವೆ ಇಲಾಖೆ ಯವರು ಯಾವುದೇ ಪೂರ್ವ ಮಾಹಿತಿ ನೀಡದೆ ಸಂಚಾರಕ್ಕೆ ಬದಲಿ ಸೂಕ್ತ ವ್ಯವಸ್ಥೆ ಮಾಡದೆ ಬಂದ್ ಮಾಡಿದ್ದಾರೆ ಎಂದು ಆರೋಪಿಸಿ ಬೆಳಿಗ್ಗೆ ಪರಂಗಿಪೇಟೆ ರೈಲ್ವೆ ಲೆವೆಲ್ ಕ್ರಾಸ್‍ನ ಬಳಿಯಲ್ಲಿ ಪ್ರತಿಭಟನೆ ನಡೆಸಿ ನ್ಯಾಯ ಬೇಕು ಎಂದು ಕೇಳಿದರು.

ಕಳೆದ ವಾರ ಈ ಬಗ್ಗೆ ಇಲ್ಲಿನ ನಿವಾಸಿಗಳಿಗೆ ಮಾಹಿತಿ ದೊರಕಿದ್ದು ಈ ನಿರ್ಧಾರ ವನ್ನು ಕೈಬಿಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಕಾಮಗಾರಿಯ ಹಿನ್ನೆಲೆಯಲ್ಲಿ ಬಂದ್ ಮಾಡಲಾಗಿದೆ ಮೂರು ದಿನಗಳಲ್ಲಿ ಕೆಲಸ ಮುಗಿಸಿ ರೈಲ್ವೆ ಲೆವಕ್ ಕ್ರಾಸ್ ನ್ನು ಸಂಚಾರಕ್ಕೆ ಮುಕ್ತ ಮಾಡಿ ಕೊಡುತ್ತೇವೆ ಎಂದು ರೈಲ್ವೆ ಇಲಾಖೆಯ ಅಧಿಕಾರಿಗಳು ಪೋನ್ ಮೂಲಕ ತಿಳಿಸಿ ಪ್ರತಿಭಟನೆಯನ್ನು ಕೈ ಬಿಡಿಸಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆದರೆ ಕಾಮಗಾರಿ ಮುಗಿದ ಬಳಿಕ ನಿನ್ನೆ ಶಾಸ್ವತವಾಗಿ ಲೆವೆಲ್ ಕ್ರಾಸ್ ನ್ನು ಸಂಚಾರ ಮಾಡದಂತೆ ಬಂದ್ ಮಾಡಿದ್ದರಿಂದ ಆಕ್ರೋಶಿತರಾದ ಸ್ಥಳೀಯ ರು ನಮಗೆ ಸಂಚಾರಕ್ಕೆ ತೀವ್ರ ತೊಂದರೆ ಆಗುವುದರಿಂದ ರೈಲ್ವೆ ಲೆವಲ್ ಕ್ರಾಸ್ ನ್ನು ಸಂಚಾರಕ್ಕೆ ಅವಕಾಶ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು.

ಈ ಕ್ರಾಸ್ ಮೂಲಕ ಸಂಚಾರ ಮಾಡುವ ಸುಮಾರು ಐದು ಸಾವಿರಕ್ಕಿಂತಲೂ ಅಧಿಕ ಜನರಿಗೆ ಇವರ ಈ ನಿರ್ಧಾರ ದಿಂದ ತೊಂದರೆ ಆಗುತ್ತದೆ.ಅನೇಕ ವರ್ಷಗಳ ಹಿಂದೆ ಇವರು ಅಂಡರ್ ಗ್ರೌಂಡ್ ರಸ್ತೆಯೊಂದನ್ನು ನಿರ್ಮಿಸಿಕೊಟ್ಟಿದ್ದು ಅದು ಅವೈಜ್ಞಾನಿಕವಾಗಿದೆ. ಈ ರಸ್ತೆಯಲ್ಲಿ ಕನಿಷ್ಠ ಆರು ತಿಂಗಳ ಕಾಲ ನೀರು ನಿಲ್ಲುತ್ತದೆ, ಉಳಿದಂತೆ ಸಂಚಾರಕ್ಕೆ ಯೋಗ್ಯವಾಗಿರುವ ರಸ್ತೆಯಲ್ಲ, ಮಹಿಳೆಯರು ಸಹಿತ ಮಕ್ಕಳು ಈ ರಸ್ತೆಯಲ್ಲಿ ಸಂಚರಿಸಲು ಸಾಧ್ಯವಿಲ್ಲ. ಹಾಗಾಗಿ ಸ್ಥಳೀಯ ಜನರಿಗೆ ಮಾಹಿತಿ ನೀಡಿ ಬದಲಿ ರಸ್ತೆ ಯನ್ನು ಕಲ್ಪಿಸಿಕೊಡಿ ಬಳಿಕ ಲೆವಲ್ ಕ್ರಾಸ್ ಬಂದ್ ಮಾಡಿ ಎಂದು ಪ್ರತಿಭಟಕಾರರು ಒತ್ತಾಯಿಸಿದರು. ಶಾಶ್ವತವಾದ ರಸ್ತೆಯನ್ನು ನಿರ್ಮಾಣ ಮಾಡಿ ಕೊಡಿ ಎಂದು ಇಲ್ಲಿನ ನಿವಾಸಿಗಳು ಅನೇಕ ವರ್ಷಗಳಿಂದ ಒತ್ತಾಯಿಸುತ್ತಲೇ ಬಂದಿದ್ದರು. ಕೆ.ಪಿ.ನಾಯ್ಡು ಸೀನಿಯರ್ ರೈಲ್ವೆ ಸೆಕ್ಸನ್ ಇಂಜಿನಿಯರ್ ಅವರು ಸ್ಥಳಕ್ಕೆ ಭೇಟಿ ನೀಡಿ ಬಳಿಕ ಪ್ರತಿಭಟನಕಾರರ ಜೊತೆ ಮಾತನಾಡಿದ ಅವರು ಇಲ್ಲಿ ವಾಹನ ಹಾಗೂ ಜನರ ಕ್ರಾಸ್ ಮಾಡುವ ಹಾಗಿಲ್ಲ, ಇದು ಅಪಾಯಕಾರಿ ಮತ್ತು ಅಕ್ರಮವಾಗಿದೆ ಸಂಚಾರದ ವೇಳೆ ಅವಘಡಗಳು ಸಂಭವಿಸುವ ಸಾಧ್ಯತೆಗಳಿವೆ. ಈ ಹಿನ್ನೆಲೆಯಲ್ಲಿ ಸಂಚಾರಕ್ಕೆ ಇಲಾಖೆ ಅವಕಾಶ ನೀಡುವುದಿಲ್ಲ, ನಿಮಗೆ ಬದಲಿ ವ್ಯವಸ್ಥೆ ಮಾಡಿಕೊಡುವಂತೆ ಇಲಾಖೆ ಲಿಖಿತವಾಗಿ ಪತ್ರ ಬರೆಯುವಂತೆ ತಿಳಿಸಿದ್ದಾರೆ.

ಅದರೆ ಇದಕ್ಕೆ ಜಗ್ಗದ ಪ್ರತಿಭಟನಾಕಾರರು ಕೊನೆಗೆ ರೈಲ್ವೆ ಇಲಾಖೆಯವರು ಅಡ್ಡವಾಗಿ ಹಾಕಿದ್ದ ಕಲ್ಲುಗಳನ್ನು ಎತ್ತಿ ಪಕ್ಕಕ್ಕೆ ಸರಿಸಿದರು. ಪ್ರತಿಭಟನೆಯಲ್ಲಿ ಗ್ರಾ.ಪಂ.ಅಧ್ಯಕ್ಷ ರಮ್ಲಾನ್, ಮಾಜಿ ಜಿ.ಪಂ.ಸದಸ್ಯ ಉಮ್ಮರ್ ಫಾರೂಕ್, ಮಾಜಿ ತಾ.ಪಂ.ಸದಸ್ಯ ಇಕ್ಬಾಲ್, ಪ್ರಮುಖರಾದ ಲಕ್ಷಣ್ ಕುಂಪಣಮಜಲು, ಗಿರೀಶ್ ಶೆಟ್ಟಿ ಕುಂಪಣಮಜಲು, ಸಂತೋಷ್ ಗಾಂಭೀರ, ಧನರಾಜ್ ಶೆಟ್ಟಿ, ಜಗದೀಪ್, ಸಂದೇಶ್ ಕುಂಪಣಮಜಲು, ವಿಕ್ರಂ ಬರ್ಕೆ, ಸುರೇಶ್ ಶೆಟ್ಟಿ ಬರ್ಕೆ, ಸತೀಶ್ ಶೆಟ್ಟಿ ಕುಂಪಣಮಜಲು, ಭಾಗಿಯಾಗಿದ್ರು .

ಸ್ಥಳಕ್ಕೆ ಬಂಟ್ವಾಳ ಎ.ಎಸ್.ಪಿ.ಸೈದುಲು ಅಡಾವತ್, ಸಿ.ಐ.ಶರಣ್ ಗೌಡ, ಎಸ್.ಐ.ಪ್ರಸನ್ನ ಹಾಗೂ ರೈಲ್ವೆ ಇಲಾಖೆಯ ಪೋಲೀಸರು ಹಾಜರಿದ್ದು ಸೂಕ್ತವಾದ ಬಂದೋ ಬಸ್ತ್ ಮಾಡಿದ್ದಾರೆ