ನವದೆಹಲಿ : ಇಸ್ರೋದ ಮಹಾತ್ವಕಾಂಕ್ಷೆ ಯೋಜನೆಯಲ್ಲಿ ಒಂದಾಗಿರುವ ಚಂದ್ರಯಾನ-2 ಉಪಗ್ರಹ ಉಡಾವಣೆಗೆ ದಿನಾಂಕ ನಿಗದಿಯಾಗಿದೆ. ಜೂನ್ 6 ರಿಂದ 16ರೊಳಗೆ ಚಂದ್ರಯಾನ-2 ಉಪಗ್ರಹದ ಉಡಾವಣೆಗೆ ಇಸ್ರೋ ಸಜ್ಜಾಗಿದ್ದು, ಆಂಧ್ರ ಪ್ರದೇಶದ ಶ್ರೀಹರಿಕೋಟಾ ಬಾಹ್ಯಕಾಶ ಕೇಂದ್ರದಿಂದ ಉಪಗ್ರಹ ಉಡಾವಣೆ ಆಗಲಿದೆಯಂತೆ. ಇನ್ನು ಚಂದ್ರಯಾನ-2 ಉಪಗ್ರಹವು ಚಂದ್ರನಲ್ಲಿ ನೀರಿನ ಅಂಶ ಪತ್ತೆ ಹಚ್ಚಲು ಈ ಉಪಗ್ರಹ ಸಹಕಾರಿಯಾಗಲಿದೆ.
ಚಂದ್ರಯಾನ-2 ಯೋಜನೆ ಬಹುತೇಕ ಮೂರು ಯೋಜನೆಗಳನ್ನು ಒಂದೇ ಬಾರಿಗೆ ಕೈಗೊಳ್ಳುವುದಾಗಿದ್ದು, ಉಪಗ್ರಹ ಮೊದಲಿಗೆ ಭೂಸ್ಥಿರ ಕಕ್ಷೆಯನ್ನು ತಲುಪಲಿದ್ದು, ಅಲ್ಲಿಂದ ಲ್ಯಾಂಡರ್‍ನಿಂದ ಬೇರ್ಪಟ್ಟು ಚಂದ್ರನ ಮೇಲೆ ನಿಧಾನವಾಗಿ ಇಳಿಯಲಿದೆ ಎನ್ನಲಾಗಿದೆ. ಚಂದ್ರಯಾನ -2 ಉಪಗ್ರಹ ಯಶಸ್ವಿಯಾದರೆ ಆಮೇರಿಕಾ, ಚೀನಾ, ರಷ್ಯಾ ಬಳಿಕ ಭಾರತ ಈ ಸಾಧನೆ ಮಾಡುವಂತಹ ನಾಲ್ಕನೇ ರಾಷ್ಟ್ರವಾಗಿ ಹೊರ ಹೊಮ್ಮಲಿದೆ.