Tuesday, January 21, 2025
ಸುದ್ದಿ

ಮಸೂದ್ ಜಾಗತಿಕ ಉಗ್ರ ಎಂದು ಘೋಷಣೆಯ ಹಿಂದೆ ಕಾಂಗ್ರೆಸ್‍ನ ಶ್ರಮವಿದೆ; ಪಿ.ಚಿದಂಬರಂ – ಕಹಳೆ ನ್ಯೂಸ್

ನವದೆಹಲಿ: ಜೈಷ್ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಮಸೂದ್ ಅಜರ್‌ನನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಜಾಗತಿಕ ಭಯೋತ್ಪಾದಕ ಎಂದು ಘೋಷಿಸಿರುವುದನ್ನು ಕಾಂಗ್ರೆಸ್ ನಾಯಕ ಮತ್ತು ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ ಸ್ವಾಗತಿಸಿದ್ದು, ಇದಕ್ಕೆ ಹಿಂದಿನ ಯುಪಿಎ ಸರ್ಕಾರದ ಪರಿಶ್ರಮವೂ ಇದೆ ಎಂದು ಹೇಳಿದ್ದಾರೆ. ಈ ಕುರಿತು ಸರಣಿ ಟ್ವೀಟ್ ಮಾಡಿರುವ ಚಿದಂಬರಂ ಭಾರತೀಯ ವಿಮಾನವನ್ನು ಉಗ್ರಗಾಮಿಗಳು ಅಪಹರಿಸಿದ ನಂತರ 1999ರಲ್ಲಿ ಆಗಿನ ಬಿಜೆಪಿ ಸರ್ಕಾರ ಅಜರ್‌ನನ್ನು ಬಿಡುಗಡೆ ಮಾಡಿತ್ತು ಎಂದು ಟೀಕಿಸಿದರು.

2008ರ ಮುಂಬೈ ದಾಳಿಯ ರೂವಾರಿ ಅಜರ್ ವಿರುದ್ಧ ಆಗಿನ ಯುಪಿಎ ಸರ್ಕಾರ 2009ರಿಂದಲೇ ಆತನನ್ನು ಅಂತಾರಾಷ್ಟ್ರೀಯ ಉಗ್ರಗಾಮಿ ಎಂದು ಘೋಷಿಸಬೇಕೆಂಬ ತೀವ್ರ ಒತ್ತಡ ಆರಂಭಿಸಿತ್ತು. ಅಜರ್‌ನನ್ನು ಈಗ ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಿಸಿರುವುದು ಸ್ವಾಗತ. ಇದಕ್ಕೆ ಕಾಂಗ್ರೆಸ್‍ನ ಅಪಾರ ಪರಿಶ್ರಮವೂ ಇದೆ ಎಂದು ಚಿದಂಬರಂ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು