Tuesday, January 21, 2025
ಸುದ್ದಿ

ಹಿರಣ್ಣಯ್ಯರ ಅಂತಿಮ ದರ್ಶನ ಪಡೆದ ಗಣ್ಯಾತಿಗಣ್ಯರು – ಕಹಳೆ ನ್ಯೂಸ್

ಬೆಂಗಳೂರು: ಇಹಲೋಕ ತ್ಯಜಿಸಿದ ರಂಗಭೂಮಿ ಹಿರಿ ಕಲಾವಿದ ಮಾಸ್ಟರ್ ಹಿರಣ್ಣಯ್ಯ ಅವರ ಅಂತಿಮ ದರ್ಶನವನ್ನು ಗಣ್ಯಾತೀಗಣ್ಯರು ಸೇರಿದಂತೆ ಸಾವಿರಾರು ಮಂದಿ ಪಡೆಯುತ್ತಿದ್ದಾರೆ. ಬನಶಂಕರಿಯ 2 ನೇ ಹಂತದಲ್ಲಿರುವ ಹಿರಣ್ಣಯ್ಯ ಅವರ ನಿವಾಸ ಶಾಂತಿಸಾಗರದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಸಚಿವ ಡಿ.ಕೆ.ಶಿವಕುಮಾರ್ , ಮಾಜಿ , ಡಿಸಿಎಂ ಆರ್.ಅಶೋಕ್ , ಮುಖ್ಯಮಂತ್ರಿ ಚಂದ್ರು , ನಟರಾದ ಶ್ರೀನಾಥ್ , ದೇವ್‍ರಾಜ್, ದರ್ಶನ್, ಪ್ರಜ್ವಲ್ ದೇವ್‍ರಾಜ್ ಸೇರಿದಂತೆ ರಂಗಭೂಮಿ, ಸಿನಿಮಾ ಮತ್ತು ಕಿರುತೆರೆಯ ನೂರಾರು ಕಲಾವಿದರು ಆಗಮಿಸಿ ಹಿರಿಯ ಚೇತನಕ್ಕೆ ಅಂತಿಮ ನಮನ ಸಲ್ಲಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು