ದೇಶದಲ್ಲಿ ಬುರ್ಕಾ ನಿಷೇಧದ ಚರ್ಚೆ ಜೋರಾಗಿದೆ. ಈ ಮಧ್ಯೆ ಕೇರಳದ ಮುಸ್ಲಿಂ ಕಾಲೇಜು ಮಹತ್ವದ ನಿರ್ಧಾರ ತೆಗೆದುಕೊಂಡಿದೆ. ಕೇರಳದ ಮಲಪ್ಪುರಂನ ಅಲ್ಪಸಂಖ್ಯಾತ ಕಾಲೇಜಿನಲ್ಲಿ ಬುರ್ಕಾ ಮೇಲೆ ನಿಷೇಧ ಹೇರಲಾಗಿದೆ. ವಿದ್ಯಾರ್ಥಿನಿಯರಿಗೆ ಬುರ್ಕಾ ಧರಿಸಿ ಕಾಲೇಜಿಗೆ ಬರದಂತೆ ಸೂಚನೆ ನೀಡಲಾಗಿದೆ. ಶ್ರೀಲಂಕಾದಲ್ಲಿ ನಡೆದ ಭಯೋತ್ಪಾದಕ ದಾಳಿ ನಂತ್ರ ಅಲ್ಲಿ ಬುರ್ಕಾ ಮೇಲೆ ನಿಷೇಧ ಹೇರಲಾಗಿದೆ.
ಶ್ರೀಲಂಕಾದಂತೆ ಭಾರತದಲ್ಲೂ ಬುರ್ಕಾ ಮೇಲೆ ನಿಷೇಧ ಹೇರಬೇಕೆಂದು ಶಿವಸೇನೆ ಆಗ್ರಹಿಸಿತ್ತು. ರಾವಣನ ಭೂಮಿಯಲ್ಲೇ ಬುರ್ಕಾ ನಿಷೇಧ ಮಾಡುತ್ತಾರೆಂದ್ರೆ ರಾಮನ ಭೂಮಿಯಲ್ಲಿ ಏಕೆ ಬುರ್ಕಾ ಮೇಲೆ ನಿಷೇಧ ಹೇರಬಾರದು ಎಂದು ಶಿವಸೇನೆ ಪ್ರಶ್ನೆ ಮಾಡಿತ್ತು. ಶಿವಸೇನೆ ಹೇಳಿಕೆಗೆ ಸಾಕಷ್ಟು ಪರ-ವಿರೋಧ ಹೇಳಿಕೆಗಳು ಕೇಳಿ ಬರ್ತಿವೆ. ಈ ಮಧ್ಯೆ ಕೇರಳ ಮುಸ್ಲಿಂ ಕಾಲೇಜಿನಲ್ಲಿ ಬುರ್ಕಾ ನಿಷೇಧ ಮಾಡಿರುವುದು ಚರ್ಚೆಗೆ ಕಾರಣವಾಗಿದೆ.