ಎಂಕು ಪಣಂಬೂರಿಗೆ, ಕುಟ್ಟಿ ಕುಂದಾಪುರಕ್ಕೆ , ಸುದ್ದಿ ಶಿವಾನಂದ ವಾರಣಾಸಿಗೆ ; ಇದು ಪ್ರಜಾಪ್ರಭುತ್ವದ ಜಯ – ದಿನೇಶ್ ಜೈನ್ – ಕಹಳೆ ನ್ಯೂಸ್
ವಾರಾಣಸಿ(ಮೇ.02): ಮಹತ್ವದ ಬೆಳವಣಿಗೆಯೊಂದರಲ್ಲಿ ವಾರಾಣಸಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಕನ್ನಡಿಗ ಸುದ್ದಿಬಿಡುಗಡೆಯ ಯುಪಿ ಶಿವಾನಂದ ಅವರ ನಾಮಪತ್ರ ತಿರಸ್ಕೃತಗೊಂಡಿದೆ.
ಸುಳ್ಯದ ಸುದ್ದಿ ಬಿಡುಗಡೆ ಪತ್ರಿಕೆಯ ಸಂಪಾದಕ ಯುಪಿ ಶಿವಾನಂದ ಪ್ರಧಾನಿ ಮೋದಿ ವಿರದ್ಧ ವಾರಾಣಸಿಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು.
ಆದರೆ ಶಿವಾನಂದ ಸಲ್ಲಿಸಿದ್ದ ನಾಮಪತ್ರದಲ್ಲಿ ದೋಷ ಕಂಡುಬಂದ ಕಾರಣ ಅವರ ನಾಮಪತ್ರವನ್ನು ತಿರಸ್ಕರಿಸಿಲಾಗಿದೆ ಎಂದು ಚುನಾವಣಾ ಆಯೋಗ ಮಾಹಿತಿ ನೀಡಿದೆ.
ಈದರ ಬನ್ನಲ್ಲೆ ಶಿವಾನಂದರ ವಿರುದ್ಧ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಆಕ್ರೋಶ ಹೊರಬಿದ್ದಿದೆ.
ತನ್ನ ಮತವನ್ನೇ ಚಲಾವಣೆ ಮಾಡದೆ, ಇಂದು ತಾನು ಅಭ್ಯರ್ಥಿಯಾಗಿ ನಿಂತಿರುವುದು ಎಷ್ಟು ಸರಿ..? ಇದು ಕೇವಲ ಹಾಸ್ಯಾಸ್ಪದ. ಎಂಕು ಪಣಂಬೂರಿಗೆ, ಕುಟ್ಟಿ ಕುಂದಾಪುರಕ್ಕೆ , ಸುದ್ದಿ ಶಿವಾನಂದ ವಾರಣಾಸಿಗೆ ಇದು ಪ್ರಜಾಪ್ರಭುತ್ವದ ಜಯ ಎಂದು ಪುತ್ತೂರಿನ ಮುಖಂಡ ದಿನೇಶ್ ಕುಮಾರ್ ಜೈನ್ ಹೇಳಿಕೆ ನೀಡಿದ್ದಾರೆ.