ಮೈಸೂರು: ಶ್ರೀರಂಗಪಟ್ಟಣ ತಾಲೂಕಿನ ಕೆಆರ್‍ಎಸ್ ಹಿನ್ನೀರಿನಲ್ಲಿ ಮುಳುಗಿ ಕಾಣೆಯಾಗಿದ್ದ ಪ್ರಸಿದ್ದ ದೇವಾಲಯ ವೇಣುಗೋಪಾಲ ಸ್ವಾಮಿ ದೇವಸ್ಥಾನ ಇದೀಗ ಮತ್ತೆ ಗೋಚರವಾಗಿದೆ. ಕೆಆರ್‍ಎಸ್ ಜಲಾಶಯದ ನೀರಿನ ಮಟ್ಟ ಬೇಸಿಗೆಯ ಕಾರಣದಿಂದಾಗಿ 86 ಅಡಿಗೆ ಕುಸಿದ ಕಾರಣದಿಂದಾಗಿ, ನೀರಿನಲ್ಲಿ ಮುಳುಗಿದ್ದ ಐತಿಹಾಸಿಕ ಲಕ್ಷ್ಮೀ ನಾರಾಯಣಸ್ವಾಮಿ ದೇವಾಲಯ ಇದೀಗ ಜನರಿಗೆ ಗೋಚರಿಸುವಂತಾಗಿದೆ.
ಐತಿಹಾಸಿಕ ಲಕ್ಷ್ಮೀನಾರಾಯಣಸ್ವಾಮಿ ದೇವಾಲಯ ಕೆಆರ್‍ಎಸ್ ಹಿನ್ನೀರಿನ ಮಟ್ಟ ಕಡಿಮೆಯಾಗಿ ಕಾಣುತ್ತಿರುವುದರಿಂದಾಗಿ, ಈ ದೇವಾಲಯವನ್ನು ನೋಡಲು ತಂಡೋಪ ತಂಡವಾಗಿ, ಜನರು ಆಗಮಿಸುತ್ತಿದ್ದಾರೆ. ಅಲ್ಲದೇ ಕೆಆರ್‍ಎಸ್‍ನಲ್ಲಿನ ಕಾರಂಜಿ, ಬೃಂದಾವನ ನೋಡಲು ಬಂದ ಪ್ರವಾಸಿಗರು ಕೂಡ ಹಿನ್ನೀರಿಗೆ ತೆರಳಿ, ಲಕ್ಷ್ಮೀನಾರಾಯಣ ಸ್ವಾಮಿ ದೇವಸ್ಥಾನವನ್ನು ನೋಡಿ ಕಣ್ ತುಂಬಿಕೊಂಡು ಬರುತ್ತಿದ್ದಾರೆ.
ಅಂದಹಾಗೇ, ಪ್ರಸಿದ್ದ ವೇಣುಗೋಪಾಲಸ್ವಾಮಿ ದೇವಾಲಯ 12ನೇ ಶತಮಾನದ ಹೊಯ್ಸಳರ ಶೈಲಿಯಲ್ಲಿ ನಿರ್ಮಾಣವಾಗಿರುವ ದೇವಾಲಯವಾಗಿದೆ. ಇಂತಹ ದೇವಾಲಯ ಸಂಪೂರ್ಣವಾಗಿ ಕೆಆರ್‍ಎಸ್ ಹಿನ್ನೀರಿನಲ್ಲಿ ಮುಳುಗಿದರೂ ಏನೂ ಆಗಿಲ್ಲ. ಕಾರಣ, ಈ ದೇವಾಲಯ ಸಂಪೂರ್ಣವಾಗಿ ಶಿಲೆಯಿಂದಲೇ ನಿರ್ಮಾಣವಾಗಿದೆ.