ಮಾದಕ ವಸ್ತು ತಯಾರು ಮಾಡುತ್ತಿದ್ದ ಲ್ಯಾಬ್ ಮೇಲೆ ದಾಳಿ ನಡೆಸಿ ಶಿವರಾಜ್ ಅರಸ್ ಹಾಗೂ ಕಣ್ಣನ್ ಎಂಬುವರನ್ನು ಪೊಲೀಸರು ಬಂದಿಸಿದ್ದಾರೆ.
ಮಾದಕ ವಸ್ತು ನಿಯಂತ್ರಣ ದಳ ಬೆಂಗಳೂರಿನ ಕೆಂಗೇರಿಯಲ್ಲಿ ಪರಿಶೀಲನೆ ನಡೆಸಿದಾಗ ಡ್ರಗ್ಸ್ ಲ್ಯಾಬ್ ನಡೆಸುತ್ತಿದ್ದ ಪ್ರಕರಣ ಬೆಳಕಿಗೆ ಬಂದಿದ್ದು ಡ್ರಗ್ಸ್ ತಯಾರುಸುತ್ತಿದ್ದ ಯಂತ್ರಗಳನ್ನು ವಶಕ್ಕೆ ಪಡೆದಿದ್ದಾರೆ. ಅಲ್ಲದೇ ಬ್ಲೂ ಬಾಕ್ಸ್ ಓವೆನ್ ಹಾಗೂ ಹಣ ಕೌಂಟಿಗ್ ಯಂತ್ರ ಸಹ ಮಾರಾಟಗಾರರ ಬಳಿ ಸಿಕ್ಕಿದೆ. ಇವರು ಕೆಟಾಮಿನ್ ಡ್ರಗ್ಸ್ ನ್ನು ತಯಾರು ಮಾಡುತ್ತಿದ್ದು ಇದನ್ನು ಅನಸ್ತೇಶಿಯಾ ರೀತಿ ಎಚ್ಚರ ತಪ್ಪಿಸಲು ಬಳಕೆ ಮಾಡಲಾಗುತ್ತಿತ್ತು. ಹಲವು ಅತ್ಯಾಚಾರದ ಪ್ರಕರಣದಲ್ಲಿಯೂ ಈ ಡ್ರಗ್ಸ್ ಬಳಕೆ ಮಾಡಿದ ಉದಾಹರಣೆಗಳಿವೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.