Monday, November 25, 2024
ಸುದ್ದಿ

ಫನಿ ಚಂಡಮಾರುತ ಕರ್ನಾಟಕದ ಹಲವೆಡೆ ಮಳೆ ಸಾದ್ಯತೆ – ಕಹಳೆ ನ್ಯೂಸ್

ಬೆಂಗಳೂರು : ಗುರುವಾರದಿಂದಲೇ ಒಡಿಶಾದಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಗಂಟೆಗೆ 170ರಿಂದ 180 ಕಿಲೋ ಮೀಟರ್ ಗರಿಷ್ಠ 200 ಕಿಲೋ ಮೀಟರ್ ವೇಗದಲ್ಲಿ ಬಿರುಗಾಳಿಯೊಂದಿಗೆ ಮಳೆ ಬೀಳುತ್ತಿದೆ. ಒಡಿಶಾ ದಾಟಿ ಫನಿ ಪಶ್ಚಿಮ ಬಂಗಾಳ ಪ್ರವೇಶಿಸಲಿದ್ದು ಅಲ್ಲಿಯೂ ಗಂಟೆಗೆ 100 ಕಿಲೋ ಮೀಟರ್ ವೇಗದಲ್ಲಿ ಭೀಕರ ಗಾಳಿ ಬೀಸಲಿದೆ. ಫನಿ ಚಂಡಮಾರುತದ ಎಫೆಕ್ಟ್ ನಿಂದ ಕರ್ನಾಟಕದ ಹಲವು ಕಡೆಗಳಲ್ಲಿ ಬಿರುಗಾಳಿ ಸಹಿತ ಧಾರಾಕಾರ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.

ಕೆಲವೇ ನಿಮಿಷಗಳಲ್ಲಿ 20 ವರ್ಷಗಳಲ್ಲೇ ಅತ್ಯಂತ ಭೀಕರ ಎನ್ನಲಾದ ಫನಿ ಚಂಡಮಾರುತ ಒಡಿಶಾ ಕರಾವಳಿ ಮೂಲಕ ಹಾದು ಹೋಗಲಿದೆ. ಒಡಿಶಾದ ಕರಾವಳಿ ಜಿಲ್ಲೆಗಳಾದ ಗೋಪಾಲಪುರ, ಪುರಿ, ಚಾಂದ್‍ಬಲಿ ಮೂಲಕ ಸೆಕ್ಲೋನ್ ಅಪ್ಪಳಿಸಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಸೈಕ್ಲೋನ್ ಹಿನ್ನೆಲೆಯಲ್ಲಿ ರೈಲುಗಳ ಓಡಾಟ ಮತ್ತು ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಲಾಗಿದೆ. 8 ಲಕ್ಷ ಅಧಿಕ ಮಂದಿಯನ್ನ ಒಡಿಶಾದಲ್ಲಿ ಸ್ಥಳಾಂತರ ಮಾಡಲಾಗಿದ್ದು, ನೌಕಾದಳ, ವಾಯುಸೇನೆ, ಕರಾವಳಿ ಭದ್ರತಾ ಪಡೆ, ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ರಕ್ಷಣಾ ಕಾರ್ಯದಲ್ಲಿ ತೊಡಗಿಸಿಕೊಂಡಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಫನಿಯಿಂದಾಗಿ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಶೀತ ಗಾಳಿ ಬೀಸಲಿದ್ದು ವಾತಾವರಣದ ಉಷ್ಣಾಂಶ ತಗ್ಗಲಿದೆ. ಹೈದಾರಾಬಾದ್ ಕರ್ನಾಟಕ, ಉತ್ತರ ಕರ್ನಾಟಕ ಭಾಗದಲ್ಲಿ ಮಳೆ ಸಾಧ್ಯತೆ ತೀರಾ ಕಡಿಮೆ ಎಂದು ಹೇಳಿದೆ. ಆದರೆ ಚಂಡಮಾರುತದ ಪಥ ತೀವ್ರತೆ ಕ್ಷಣ ಕ್ಷಣಕ್ಕೂ ಬದಲಾಗೋದ್ರಿಂದ ಯಾವ ರೀತಿ ವಾತಾವರಣ ದಲ್ಲಿ ಏರುಪೇರಾಗಲಿದೆ ಅನ್ನೋದನ್ನು ಹೇಳಲು ಸಾಧ್ಯವಿಲ್ಲ ಎಂದು ಪ್ರಾಕೃತಿಕ ವಿಕೋಪ ನಿರ್ವಹಣಾ ಇಲಾಖೆ ತಿಳಿಸಿದೆ.