ಮೋಸ್ಟ್ ವಾಟೆಂಟ್ ಉಗ್ರ ಮಸೂದ್ ಅಜರ್ನನ್ನು ಜಾಗತಿಕ ಉಗ್ರ ಎಂದು ವಿಶ್ವಸಂಸ್ಥೆ ಘೋಷಿಸಿದ್ದು, ಭಯೋತ್ಪಾದನೆ ವಿರುದ್ಧದ ಹೋರಾಟಕ್ಕೆ ಭಾರತಕ್ಕೆ ಅತೀ ದೊಡ್ಡ ರಾಜತಾಂತ್ರಿಕ ಗೆಲುವು ಸಿಕ್ಕಿದೆ. ಮಸೂದ್ ಅಜರ್ಗೆ ಜಾಗತಿಕ ಉಗ್ರಪಟ್ಟ ನೀಡಲು ಟೀಂ ಇಂಡಿಯಾ ಮಾಜಿ ನಾಯಕ, ಹಿರಿಯ ಕ್ರಿಕೆಟಿಗ ಎಂ.ಎಸ್.ಧೋನಿ ನೀತಿಗಳೇ ನೆರವಾಗಿದೆ ಅನ್ನೋ ಸತ್ಯ ಬಹಿರಂಗವಾಗಿದೆ.
ಭಾರತದ ಗೆಲುವಿಗೆ ಮುಖ್ಯ ಕಾರಣ ವಿಶ್ವಸಂಸ್ಥೆಯ ನಮ್ಮ ರಾಯಭಾರಿ ಸಯ್ಯದ್ ಅಕ್ಬರುದ್ದೀನ್. ಸಯ್ಯದ್ ಅಕ್ಬರುದ್ದೀನ್, ಎಂ.ಎಸ್.ಧೋನಿ ಅಭಿಮಾನಿ. ಧೋನಿ ಮೈದಾನದಲ್ಲಿ ಕೊನೆಯ ಎಸೆತದವರೆಗೂ ಹೋರಾಡುತ್ತಾರೆ. ಇಷ್ಟೇ ಅಲ್ಲ ಯಾವುದೇ ಸಂದರ್ಭದಲ್ಲೂ ಆತ್ಮವಿಶ್ವಾಸ ಕಳೆದುಕೊಳ್ಳುವುದಿಲ್ಲ. ಅಂತಿಮ ಓವರ್ನಲ್ಲಿ ಅದೆಷ್ಟೇ ರನ್ ಬೇಕಿದ್ದರೂ ಅಷ್ಟೇ ತಾಳ್ಮೆಯಿಂದ ಪಂದ್ಯ ಫಿನೀಶ್ ಮಾಡುತ್ತಾರೆ. ಇದೇ ಫಾರ್ಮುಲಾವನ್ಮು ಸಯ್ಯದ್ ಅಕ್ಬರುದ್ದೀನ್ ಮಸೂದ್ ಅಜರ್ ವಿರುದ್ಧದ ಹೋರಾಟದಲ್ಲೂ ಪ್ರಯೋಗಿಸಿದ್ದಾರೆ.