Recent Posts

Monday, January 20, 2025
ಸಿನಿಮಾಸುದ್ದಿ

ತೆಲುಗು ಸೂಪರ್‌ಸ್ಟಾರ್ ಚಿರಂಜೀವಿ ‘ಸೈ ರಾ ನರಸಿಂಹ ರೆಡ್ಡಿ’ ಎಂಬ ಸಿನೆಮಾ ಸೆಟ್‍ನಲ್ಲಿ ಅಗ್ನಿ ದುರಂತ – ಕಹಳೆ ನ್ಯೂಸ್

ಹೈದರಾಬಾದ್: ಹೈದರಾಬಾದ್‍ನ ಹೊರವಲಯದಲ್ಲಿರುವ ಸಿನೆಮಾ ಸೆಟ್‍ನಲ್ಲಿ ಅಗ್ನಿ ದುರಂತ ಸಂಭವಿಸಿದೆ. ತೆಲುಗು ಸೂಪರ್‌ಸ್ಟಾರ್ ಚಿರಂಜೀವಿ ‘ಸೈ ರಾ ನರಸಿಂಹ ರೆಡ್ಡಿ’ ಎಂಬ ಸಿನೆಮಾದಲ್ಲಿ ಅಭಿನಯಿಸುತ್ತಿದ್ದಾರೆ. ಅಗ್ನಿ ದುರಂತ ನಡೆಯುವಾಗ ಸೆಟ್‍ನಲ್ಲಿ ಯಾರೂ ಇರದ ಕಾರಣ ಪ್ರಾಣ ಹಾನಿ ಸಂಭವಿಸಿಲ್ಲ. ಸಿನೆಮಾ ಸೆಟ್‍ನಲ್ಲಿರುವ ಕೆಲ ವಸ್ತುಗಳು ಸುಟ್ಟುಹೋಗಿದೆ. ಉಯ್ಯಲವಾಡ ನರಸಿಂಹ ರೆಡ್ಡಿಯವರ ಜೀವನವನ್ನು ಆಧರಿಸಿದ ಐತಿಹಾಸಿಕ ಯುದ್ಧ ಚಿತ್ರ ಇದಾಗಿದ್ದು ತೆಲುಗು, ತಮಿಳು ಮತ್ತು ಮಲಯಾಳಂನಲ್ಲಿ ತೆರೆಕಾಣಲಿದೆ. ಈ ಚಿತ್ರಗಳಲ್ಲಿ ಚಿರಂಜೀವಿ ಸೇರಿದಂತೆ ಅಮಿತಾಭ್ ಬಚ್ಚನ್, ನಯನತಾರ, ತಮನ್ನಾ ಮತ್ತಿತರರು ಅಭಿನಯಿಸಲಿದ್ದಾರೆ. ಈ ಚಿತ್ರವು ಚಿರಂಜೀವಿ ಅವರ ಮಗ ಮತ್ತು ಜನಪ್ರಿಯ ನಟ ರಾಮ್ ಚರಣ್ ಮತ್ತು ಸುರೇಂದ್ರ ರೆಡ್ಡಿ ನಿರ್ದೇಶಿಸುತ್ತಿರುವುದು ವಿಶೇಷ..!

ಜಾಹೀರಾತು

ಜಾಹೀರಾತು
ಜಾಹೀರಾತು