Recent Posts

Monday, January 20, 2025
ಸುದ್ದಿ

ಕುಕ್ಕೆ: ಸರ್ಪಸಂಸ್ಕಾರ ಸೇವೆಯಲ್ಲಿ ನಿರತರಾದ ಆರೋಗ್ಯ ಸಚಿವ – ಕಹಳೆ ನ್ಯೂಸ್

ಸುಬ್ರಹ್ಮಣ್ಯ: ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರಕ್ಕಾಗಮಿಸುವ ಭಕ್ತರ ಹಾಗೂ ಸ್ಥಳೀಯ ಜನತೆಯ ಅನುಕೂಲಕ್ಕಾಗಿ 25 ಹಾಸಿಗೆಯ ಸುಸಜ್ಜಿತ ಆಸ್ಪತ್ರೆ ಹೊಂದಲು ದೇಗುಲದ ಆಡಳಿತ ಮಂಡಳಿ ಆಸಕ್ತಿ ಹೊಂದಿದ್ದು ಇದಕ್ಕೆ ಸರಕಾರ ಪೂರ್ಣ ಸಹಕಾರ ನೀಡಲಿದೆ ಎಂದು ಆರೋಗ್ಯ ಸಚಿವ ಶಿವಾನಂದ ಪಾಟೀಲ್ ತಿಳಿಸಿದರು.

ಸರ್ಪಸಂಸ್ಕಾರ ಸೇವೆ ನಡೆಸಲು ಕುಟುಂಬ ಸದಸ್ಯರ ಜತೆ ಕುಕ್ಕೆ ಸುಬ್ರಹ್ಮಣ್ಯಕ್ಕೆ ಆಗಮಿಸಿ ಮೊದಲ ದಿನದ ಪೂಜೆಯಲ್ಲಿ ಪಾಲ್ಗೊಂಡ ಬಳಿಕ ಪತ್ರಕರ್ತರ ಜೊತೆ ಮಾತನಾಡಿದರು. ಆಸ್ಪತ್ರೆ ನಿರ್ಮಿಸಲು ದೇಗುಲದ ಆಡಳಿತವು ಜಾಗವನ್ನು ಕಾಯ್ದಿರಿಸಿದೆ. ದೇಗುಲದ ವತಿಯಿಂದ ಕಟ್ಟಡ ನಿರ್ಮಿಸಿಕೊಟ್ಟಲ್ಲಿ ಆಸ್ಪತ್ರೆಗೆ ವೈದ್ಯರ ಸಹಿತ ಸಿಬ್ಬಂದಿ ಹಾಗೂ ಸವಲತ್ತು ಒದಗಿಸಿ ಅದರ ಸಂಪೂರ್ಣ ನಿರ್ವಹಣೆ ಜವಾಬ್ದಾರಿಯನ್ನು ಸರಕಾರವೇ ಹೊತ್ತುಕೊಳ್ಳಲಿದೆ ಎಂದವರು ಭರವಸೆ ನೀಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ವೈದ್ಯಕೀಯ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಸಹಿತ ಎಲ್ಲ ವ್ಯವಸ್ಥೆಯನ್ನು ಸರಕಾರ ಒದಗಿಸುತ್ತಿದೆ. ಆದರೂ ಗ್ರಾಮೀಣ ಭಾಗದಲ್ಲಿ ಸೇವೆ ಸಲ್ಲಿಸಲು ವೈದ್ಯರು ಮುಂದೆ ಬರುತಿಲ್ಲ. ಇದಕ್ಕೆ ನೇಮಕಾತಿಯಲ್ಲಿ ಹೊಸ ನಿಯಮಗಳನ್ನು ರೂಪಿಸಲಾಗುತ್ತಿದೆ. ವೈದ್ಯರ ಕೊರತೆ ನೀಗಿಸುವ ಸ್ಕಾಲರ್ ಶಿಪ್ ಸಹಿತ ಹಲವು ವ್ಯವಸ್ಥೆ ಕಲ್ಪಿಸಲಾಗುತ್ತಿದೆ ವೈದ್ಯರ ಕೊರತೆ ನಿವಾರಿಸುವ ಪ್ರಯತ್ನ ನಡೆಯುತ್ತಿದೆ. ಹೊರಾಜ್ಯಗಳಿಗೆ ಹೋಲಿಸಿದರೆ ನಮ್ಮ ರಾಜ್ಯದಲ್ಲಿ ವೈದ್ಯರ ಸಂಖ್ಯೆ ಹೆಚ್ಚಿದೆ ಎಂದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಆರೋಗ್ಯ ಇಲಾಖೆಯಲ್ಲಿ ಖಾಲಿ ಇರುವ ಶುಶ್ರೂಕಿಯರ ಪೈಕಿ 800 ಮಂದಿ ತುಂಬಲು ಪ್ರಕ್ರಿಯೆ ನಡೆಯುತ್ತಿದೆ. ಆರೋಗ್ಯ ಇಲಾಖೆಯಲ್ಲಿ ಇನ್ನಷ್ಟು ವಿಭಾಗದ ಹುದ್ದೆಗಳು ಖಾಲಿ ಇದ್ದು ಇವುಗಳನ್ನು ಹಂತಹಂತವಾಗಿ ಭರ್ತಿಗೊಳಿಸುವ ಸಂಬಂಧ ಸರಕಾರದ ಆರ್ಥಿಕ ವಿಭಾಗಕ್ಕೆ ಪತ್ರ ಬರೆದಿದೆ ಎಂದರು. ಆರ್ಥಿಕ ನಷ್ಟದ ಕಾರಣಕ್ಕಾಗಿ ಆಸ್ಪತ್ರೆಗಳಲ್ಲಿನ ಗ್ರೂಪ್ ಡಿ ಹಾಗೂ ಫಾರ್ಮಸಿಸ್ಟ್ ಹುದ್ದೆಗಳನ್ನು ವಜಾಗೊಳಿಸುವ ಇತ್ತೀಚಿನ ಆದೇಶವನ್ನು ವಾಪಸ್ ಪಡೆದಿರುವುದಾಗಿ ಸಚಿವರು ತಿಳಿಸಿದರು.

ಮಹತ್ವಕಾಂಕ್ಷೆಯ ಯೋಜನೆ 108 ಆರೋಗ್ಯ ಕವಚ ಸೇವೆಯಲ್ಲಿ ಸಿಬಂದಿ ಹಾಗೂ ಗುತ್ತಿಗೆ ವಿಚಾರವಾಗಿ ಒಂದಷ್ಟು ಸಮಸ್ಯೆಗಳಿವೆ. ಅವುಗಳ ಸುಧಾರಣೆಗೂ ಅಗತ್ಯ ಕ್ರಮಗಳನ್ನು ಇಲಾಖೆ ಕೈಗೊಳ್ಳುತ್ತಿದೆ ಎಂದರು.

ಆರೋಗ್ಯ ಕರ್ನಾಟಕ ಆಯಷ್‍ಮನ್ ಭಾರತ್ ಯೋಜನೆಯಲ್ಲಿ ಎಲ್ಲ ಬಿಪಿಎಲ್ ಬಡ ಕುಟುಂಬಗಳಿಗೆ 5ಲಕ್ಷ ಮಿತಿಯೊಳಗೆ 1600 ರೋಗಗಳಿಗೆ ಚಿಕಿತ್ಸೆ ಪಡೆಯಲು ಅವಕಾಶವಿದೆ. ಇದರಲ್ಲಿ ಕೇಂದ್ರ 320 ಕೋಟಿ ಹಾಗೂ ರಾಜ್ಯದ 900 ಕೋಟಿ ಸಿಂಹಪಾಳು ಇದೆ ಎಂದರು. ಎಪಿಎಲ್ ಪಡಿತರ ಚೀಟಿ ಹೊಂದಿದವರು ರಿಯಾಯಿತಿ ದರದಲ್ಲಿ ಚಿಕಿತ್ಸೆ ವೆಚ್ಚ ಭರಿಸಲಾಗುತ್ತಿದೆ. ರಾಜ್ಯದಲ್ಲಿ 4ರಿಂದ 5 ಕೋಟಿ ಜನಸಂಖ್ಯೆಗೆ ಆರೋಗ್ಯ ಭಾಗ್ಯದ ಲಾಭ ಪಡೆಯುತ್ತಿದ್ದಾರೆ ಎಂದರು.

ಲೋಕಸಭಾ ಚುನಾವಣೆ ಫಲಿತಾಂಶ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಲು ನಿರಾಸಕ್ತಿ ತೋರಿದ ಸಚಿವರು ಯಾವುದೇ ಸರಕಾರವಿದ್ದರೂ ರಾಜಕೀಯ ಇದ್ದೆ ಇರುತ್ತದೆ ಬಿಡಿ ಎಂದು ಹೇಳಿ ಯಾವುದಕ್ಕೂ ಫಲಿತಾಂಶದ ತನಕ ಕಾಯೋಣ ಎಂದರು. ಈ ಹಿಂದೆ ನಿರ್ಧರಿಸಿದಂತೆ ದೇವರ ದರ್ಶನ ಪಡೆದು ಸೇವೆ ಸಲ್ಲಿಸಿ ತೆರಳಲು ಬಂದಿದ್ದೇನಷ್ಟೆ ಇದರಲ್ಲಿ ಬೇರೆನೂ ವಿಶೇಷತೆ ಇಲ್ಲ ಎಂದರು.

ವ್ಯವಸ್ಥಾಪನ ಸಮಿತಿ ಅಧ್ಯಕ್ಷ ನಿತ್ಯಾನಂದ ಮುಂಡೋಡಿ ಸಚಿವರನ್ನು ಶಾಲು ಹೊದಿಸಿ ದೇವರ ಭಾವಚಿತ್ರ ನೀಡಿ ಗೌರವಿಸಿದರು. ಈ ಸಂದರ್ಭ ಸುಳ್ಯ ತಾಲೂಕು ಆರೋಗ್ಯಧಿಕಾರಿ ಡಾ. ಸುಬ್ರಹ್ಮಣ್ಯ. ವೈದ್ಯ ತ್ರಿಮೂರ್ತಿ, ಹಾಗೂ ಹೇಮಂತ್ ಉಪಸ್ಥಿತರಿದ್ದರು. ಹಾಗೇ ಆರೋಗ್ಯ ಸಚಿವ ಶಿವಾನಂದ ಪಾಟೀಲ್ ಅವರನ್ನು ನಿತ್ಯಾನಂದ ಮುಂಡೋಡಿ ಸಮ್ಮಾನಿಸಿ ಗೌರವಿಸಿದರು.