Recent Posts

Monday, January 20, 2025
ಸುದ್ದಿ

ಸುಳ್ಯಕ್ಕೆ ಆಗಮಿಸಲಿರುವ ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ಪರಮಪೂಜ್ಯ ಶ್ರೀ ಡಾ ನಿರ್ಮಲಾನಂದನಾಥ ಮಹಾ ಸ್ವಾಮೀಜಿ – ಕಹಳೆ ನ್ಯೂಸ್

ಸುಳ್ಯ : ಮೇ 8ಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಪರಮಪೂಜ್ಯ ಜಗದ್ಗುರು ಶ್ರೀ ಡಾ ನಿರ್ಮಲಾನಂದನಾಥ ಮಹಾ ಸ್ವಾಮೀಜಿಯವರು ಸುಳ್ಯ ಕ್ಕೆ ಆಗಮಿಸಲಿದ್ದಾರೆ. ಸುಳ್ಯದ ಗೂನಡ್ಕದ ದೋಳದ ವೀರಪ್ಪ ಗೌಡ ಮತ್ತು ಗೌರಮ್ಮ ದಂಪತಿಗಳು ನೂತನವಾಗಿ ಸುಳ್ಯ ಕುರುಂಜಿ ಭಾಗ್‍ನಲ್ಲಿ ಕಟ್ಟಿಸಿದ ಮನೆಯ ಪ್ರವೇಶೋತ್ಸವ ಕಾರ್ಯಕ್ರಮದಲ್ಲಿ ಗುರುಪ್ರವೇಶ ಮುಖಾಂತರ ಆಶೀರ್ವಚನ ನೀಡಲಿದ್ದಾರೆ. ಇವರೊಂದಿಗೆ ಆದಿಚುಂಚನಗಿರಿ ಶಿವಮೊಗ್ಗ ಶಾಖಾಮಠದ ಸ್ವಾಮೀಜಿ ಶ್ರೀ ಪ್ರಸನ್ನನಾಥ ಸ್ವಾಮೀಜಿ ಹಾಗೂ ಮಂಗಳೂರು ಶಾಖಾಮಠದ ಶ್ರೀ ಧರ್ಮಪಾಲನಾಥ ಸ್ವಾಮೀಜಿ ಭಾಗವಹಿಸಲಿದ್ದಾರೆ.

ಜಾಹೀರಾತು

ಜಾಹೀರಾತು
ಜಾಹೀರಾತು