Sunday, January 19, 2025
ಅಂಕಣ

ಮಂಗಳದ ಮುಂಬೆಳಗು’ಕಟ್ಟೆತ್ತಿಲ ಗೋಪಾಲಕೃಷ್ಣ ಭಟ್ ಅವರ ಶ್ರೀಗುರುಪಾದಪದ್ಮ ಸರಣಿ – 35

ಮಂಜಿನ ಮಲ್ಲಿಗೆ ಮುತ್ತಿನ ತೆರದಿ ಹೊಳೆಹೊಳೆಯಿತು ತಾ ನೋಡ|
ಮೊಸರಿನ ಗಡಿಗೆ ಒಡೆಯಿತೊ ಎದುರೇ ಬಾನಂಗಳದಿ ತಿಳಿಮೋಡ||
ನಂದನವನದಾ ಗೋಪಗೋಪಿಕೆಯರ ನವರಸ ನಾಟಕ ಹೊಂಗಿರಣ|
ಅರುಣೋದಯದಾ ಹೊನ್ನ ಶರಧಿಯೊಳು ಜಗಮಗಿಸಿದೆ ಆ ಅರುಣ ||

ಹಕ್ಕಿಯು ಗೂಡನು ಬಿಟ್ಟವು ನೋಡು ಅವಸರದವರಸರದಲಿ ಬೇಗ|
ದಿಕ್ಕನು ತೋಚದೆ ಕಂಗೆಡಲಾರವು ಮುಂದಿನ ಬದುಕಿಗೆ ಅದೆ ರಾಗ||
ದೂರದ ಊರನು ಸೇರುವ ಪಯಣವು ಸಾಗರದಾಚಿನ ನವಯುಗಕೆ|
ಬರೆದಿವೆ ಮುನ್ನುಡಿ ಕಲರವದಲಿ ತಾ ಅರುಣೋದಯಾ ನವಪದಕೆ||

ಜಾಹೀರಾತು
ಜಾಹೀರಾತು
ಜಾಹೀರಾತು

ಹೆಂಗಳೆಯರು ರಂಗೋಲಿಯ ಬರೆದರು ಮುಂದಣ ಬಾಗಿಲ ಹೊಸ್ತಿಲಲಿ|
ಶೃಂಗಾರದ ಜೋಗುಳ ಹಾಡುತ ಪಾಡುತ ಮಧ್ಯಮ ಪಂಚಮ ರಾಗದಲಿ||
ಮುಂಗೋಳಿಯು ತಾ ಸ್ವರವನು ಸೇರಿಸಿ ಕುಣಿಯಿತು ನಸುಕಿನ ವೇಳೆಯಲಿ|
ಅಂಬಾ ಎಂಬ ಕರುವಿನ ಲೋಕವನೆಬ್ಬಿದಸಿ ಅಮೃತ ಘಳಿಗೆಯಲಿ||

ಜಾಹೀರಾತು
ಜಾಹೀರಾತು
ಜಾಹೀರಾತು

ತಣ್ಣನೆ ಗಾಳಿ ಬೀಸುತ ಬೀಸುತ ಆ ಸವಿ ನಿದಿರಾದೇವಿಯ ಮರೆಯುತಲಿ|
ಕಣ್ಣನು ತೆರೆದರೆ ಉಷೆ ನಗುತಿಹಳು ಸ್ವರ್ಣದ ಬಾಗಿಲ ತೆರೆಯುತಲಿ||
ಲಕ್ಷ್ಮೀ ದೇವಿಯು ಒಳಬರಲೆಂದು ಪತಿನಾರಾಯಣನಾ ಜೊತೆಯಲ್ಲಿ|
ದೇವರ ಕೋಣೆಯ ದೀಪವ ಬೆಳಗಿಸಿ ಶಂಖಧ್ವನಿ ಝೇಂಕಾರದಲಿ||

ಬಿಂದಿಗೆ ಹಾಲು ಕರೆಯಲು ಸಿದ್ಧ ಅಮೃತನಂದಿನಿ ಗೋಮಾತೆ|
ಪ್ರಾತಃಸ್ಮರಣೀಯಳೆ ತಾಯೆ ನೀನೇ ಲೋಕದ ದೇವತೆ||
ಸ್ವರ್ಣದ ವರ್ಣದ ಚೆಲುವೆಯೆ ನಿನಗೆ ಕೊಡುವೆ ನಾ ಗುಲಗಂಜಿ|
ಹೊನ್ನಿನ ಶರಧಿಯೆ ಚಿನ್ನವೆ ಬೇಡ ನೀನೆ ಆಗಿಹೆ ಅಪರಂಜಿ||

ಅಂಗಳದೆದುರಿನ ಭತ್ತದ ಗದ್ದೆಯ ಕರೆಯುತಿದೆ ತಾ ಕೈಬೀಸಿ|
ಹಸುರಿನ ವರ್ಣದ ಪಟ್ಟೆಯನುಟ್ಟಹ ಭಾರತಾಂಬೆಯ ನಗೆಸೂಸಿ||
ಅನ್ನವ ನೀಡುವ ಹೊನ್ನಿನ ಕಣಜ ಶಿರ ಬಾಗಿದೆ ತಾ ಶರಣಾಗಿ|
ಮುಂದಿನ ಪೀಳಿಗೆ ಹಿರಿಯರಿಗಾಗಿ ತಾ ಬದುಕಲೆಬೇಕೀತರ ವರವಾಗಿ||

Leave a Response