Monday, January 20, 2025
ಸುದ್ದಿ

ರೌಡಿ ಶೀಟರ್ ಎಡ್ವನ್ ಭೀಕರ ಹತ್ಯೆ: ಪತ್ನಿ, ಬಾಮೈದ ವಶಕ್ಕೆ – ಕಹಳೆ ನ್ಯೂಸ್

ಬೆಂಗಳೂರು: ರೌಡಿಶೀಟರ್ ಎಡ್ವಿನ್ ಅಲಿಯಾಸ್ ಅಲೆಗ್ಸಾಂಡರ್ ನಿನ್ನೆ ತಡರಾತ್ರಿ ಬೆಂಗಳೂರಿನ ಆಡುಗೋಡಿಯ ಎಲ್ ಆರ್ ನಗರದಲ್ಲಿ ಬರ್ಬರವಾಗಿ ಹತ್ಯೆಗೀಡಾಗಿದ್ದಾನೆ.

34 ವರ್ಷದ ಎಡ್ವಿನ್ ಆಡುಗೋಡಿ ಪೊಲೀಸ್ ಠಾಣೆ ರೌಡಿಶೀಟರ್ ಆಗಿದ್ದ. ಕಳೆದ ಕೆಲ ತಿಂಗಳಿನಿಂದ ಪತ್ನಿ ಬುಡ್ಡೊಳನ್ನು ತವರು ಮನೆಯಲ್ಲಿಯೇ ಬಿಟ್ಟು ಚೈನ್ನೈನಲ್ಲಿ ಕೆಲಸ ಮಾಡಿಕೊಂಡಿದ್ದ. ಕಳೆದ ರಾತ್ರಿ ಪತ್ನಿಯನ್ನ ಚೆನ್ನೈಗೆ ಕರೆದೊಯ್ಯಲು ಆಡುಗೋಡಿಯ ಎಲ್.ಆರ್ ನಗರಕ್ಕೆ ಬಂದಿದ್ದಾನೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಈ ವೇಳೆ ಪತಿಯೊಂದಿಗೆ ತೆರಳಲು ಪತ್ನಿ ನಿರಾಕರಿಸಿದ್ದು ಮಾತಿಗೆ ಮಾತು ಬೆಳೆದಿದೆ. ಮಾತಿನ ಚಕಮಕಿ ಮುಂದುವರೆದಿದ್ದು ಗಲಾಟೆ ಶುರುವಾಗಿ ಎಡ್ವಿನ್‍ಗೆ ಚಾಕುವಿನಿಂದ ಇರಿಯಲಾಗಿದೆ. ಇದ್ರಿಂದ ಎಡ್ವಿನ್ ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಘಟನೆ ಸಂಬಂಧ ಕೇಸ್ ದಾಖಲಿಸಿಕೊಂಡಿರುವ ಆಡುಗೋಡಿ ಪೊಲೀಸರು ಕೊಲೆ ಶಂಕೆಯ ಮೇಲೆ ಪತ್ನಿ ಬುಡ್ಡೋ ಮತ್ತು ಬಾಮೈದ ಜಗದೀಶ್‍ರನ್ನ ವಶಕ್ಕೆ ಪಡೆದು ವಿಚಾರಣೆ ಮುಂದುವರೆಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು