Tuesday, January 21, 2025
ಸುದ್ದಿ

ಸೈನಿಕರಿಗೆ ಯೇತಿ ಹೆಜ್ಜೆ ಗುರುತು ಪತ್ತೆ – ಕಹಳೆ ನ್ಯೂಸ್

ವಿಜ್ಞಾನಿಗಳಿಗೆ, ದಶಕಗಳಿಂದ ನಿಗೂಢವಾಗಿರುವ ‘ಯೇತಿ’ಯ (ಹಿಮ ಮಾನವ) ಹೆಜ್ಜೆ ಗುರುತೊಂದು ಪತ್ತೆಯಾಗಿರುವುದಾಗಿ ಭಾರತೀಯ ಸೇನೆ ಹೇಳಿಕೊಂಡಿದೆ. ನೇಪಾಳದ ಮಕಾಲು ಕ್ಯಾಂಪ್ ಬೇಸ್‍ನಲ್ಲಿದ್ದ ಭಾರತೀಯ ಸೇನೆಯ ಪರ್ವತಾರೋಹಿಗಳುಳ್ಳ ತಂಡವೊಂದಕ್ಕೆ ಎಪ್ರಿಲ್ 9 ರಂದು ಈ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿದ್ದು, ಪ್ರತಿ ಗುರುತು 32 ಇಂಚು ಉದ್ದ ಹಾಗೂ 15 ಇಂಚು ಅಗಲವಿದೆ ಎಂದು ಭಾರತೀಯ ಸೇನೆ ತನ್ನ ಟ್ವಿಟ್ಟರ್ ಖಾತೆಯಲ್ಲಿ ಹೇಳಿಕೊಂಡಿದೆ. ಜತೆಗೆ ಆ ಗುರುತುಗಳ ಚಿತ್ರವನ್ನೂ ಪ್ರಕಟಿಸಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಹಿಮಚ್ಛಾದಿತ ಪ್ರದೇಶಗಳಲ್ಲಿ ಮಾನವನನ್ನು ಹೋಲುವ ದೈತ್ಯಾಕಾರದ ದ್ವಿಪಾದಿ ಪ್ರಾಣಿಯೊಂದು ಹಲವರಿಗೆ ಕಾಣಿಸಿಕೊಂಡಿರುವ ಬಗ್ಗೆ, ಬಹಳ ಹಿಂದಿನಿಂದಲೂ ಕೇಳಿ ಬರುತ್ತಿದೆ. ಆದರೆ ಅದಕ್ಕೆ ತಕ್ಕ ನಿಖರ ಸಾಕ್ಷ್ಯಾಧಾರಗಳು ಈವರೆಗೆ ಸಿಕ್ಕಿಲ್ಲ.

ಜಾಹೀರಾತು
ಜಾಹೀರಾತು
ಜಾಹೀರಾತು