Tuesday, November 26, 2024
ಸುದ್ದಿ

ಕೇರಳದ ಈ ಎಜುಕೇಶನ್ ಸಂಸ್ಥೆಯಲ್ಲಿ ಬುರ್ಖಾ ನಿಷೇಧ – ಕಹಳೆ ನ್ಯೂಸ್

ಕೇರಳದ ಮುಸ್ಲಿಮ್ ಎಜುಕೇಶನ್ ಸೊಸೈಟಿ ಸಂಸ್ಥೆಯು ತನ್ನ 150 ಶಾಲೆಗಳಲ್ಲಿ ಬುರ್ಖಾ ನಿಷೇಧಿಸಿ ಏಪ್ರಿಲ್ 17ರಂದೇ ಸುತ್ತೋಲೆ ಹೊರಡಿಸಿರುವ ವಿಚಾರ ಬೆಳಕಿಗೆ ಬಂದಿದೆ. ಹೌದು ಶ್ರೀಲಂಕಾದಲ್ಲಿ ಬುರ್ಖಾ ನಿಷೇಧವಾದ ಬೆನ್ನಲ್ಲೇ ಕೋಳಿಕೋಡ್ ಮೂಲದ ಈ ಶಿಕ್ಷಣ ಸಂಸ್ಥೆ ಇದೇ ವರ್ಷದಿಂದ ತನ್ನ ಶಾಲೆಗಳ ಕ್ಯಾಂಪಸ್‍ಗಳಲ್ಲಿ ಯಾರೂ ಕೂಡ ಬುರ್ಖಾ ಧರಿಸಬಾರದೆಂಬ ಕಾನೂನು ಮಾಡಿದೆ. ಈ ನೂತನ ನಿಯಮವನ್ನು ಬೋಧಕರು ಮತ್ತು ವಿದ್ಯಾರ್ಥಿಗಳೆಲ್ಲರೂ ಕಟ್ಟುನಿಟ್ಟಾಗಿ ಪಾಲಿಸಬೇಕೆಂದು ಎಂಇಎಸ್ ಅಧ್ಯಕ್ಷ ಫಜಲ್ ಗಫೂರ್ ತಿಳಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

“ನಾವು ಕೇರಳದಲ್ಲಿದ್ದೇವೆ. ಅರಬ್ ನಾಡಿನ ಇಸ್ಲಾಮ್ ಅನ್ನು ಅನುಸರಿಸಬೇಕಿಲ್ಲ. ಕಳೆದ 5 ವರ್ಷದಲ್ಲಿ ಸಂಪ್ರದಾಯವಾದಿ ಮುಸ್ಲಿಂ ಸಂಘಟನೆಗಳು ಕೇರಳದ ಶಿಕ್ಷಣ ಸಂಸ್ಥೆಗಳಲ್ಲಿ ವಸ್ತ್ರ ಸಂಹಿತೆ ಹೇರಲು ಪ್ರಯತ್ನಿಸುತ್ತಿದ್ದು, ಇದನ್ನು ತಡೆಗಟ್ಟಬೇಕಿದೆ” ಎಂದು ವೈದ್ಯರೂ ಆಗಿರುವ ಫಜಲ್ ಗಫೂರ್ ಹೇಳಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

“ನಮ್ಮ ನಿರ್ಧಾರದಲ್ಲಿ ಯಾವ ವಿವಾದವೂ ಇಲ್ಲ. ನಾವು ಧರಿಸುವ ಬಟ್ಟೆ ಸಭ್ಯವಾಗಿರಬೇಕು. ಮುಖವನ್ನು ಬಟ್ಟೆಯಿಂದ ಮುಚ್ಚಿಕೊಳ್ಳಬಾರದು. ಇದು ನಮ್ಮ ದೃಷ್ಟಿಕೋನವಾಗಿದ್ದು ಇದನ್ನು ಜಾರಿ ಮಾಡಬೇಕು” ಎಂದು ಮುಸ್ಲಿಂ ಎಜುಕೇಶನ್ ಸೊಸೈಟಿ ಅಧ್ಯಕ್ಷರು ಅಭಿಪ್ರಾಯಪಟ್ಟಿದ್ದಾರೆ.

1964ರಲ್ಲಿ ಸ್ಥಾಪನೆಯಾದ ಎಂಇಎಸ್ ಸಂಸ್ಥೆಯ ಅಡಿಯಲ್ಲಿ 150ಕ್ಕೂ ಹೆಚ್ಚು ವಿವಿಧ ಶಿಕ್ಷಣ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಇದರಲ್ಲಿ 50ಕ್ಕೂ ಹೆಚ್ಚು ಶಾಲೆಗಳು, ಸ್ನಾತಕೋತ್ತರ ಕಾಲೇಜುಗಳು, ಮಹಿಳಾ ಕಾಲೇಜುಗಳೂ ಇವೆ. ಹಾಗೆಯೇ ವೃತ್ತಿಪರ ಶಿಕ್ಷಣ ನೀಡುವ ಎಂಜಿನಿಯರಿಂಗ್ ಕಾಲೇಜು, ಮೆಡಿಕಲ್ ಕಾಲೇಜು, ನಸಿರ್ಂಗ್ ಕಾಲೇಜು, ಡೆಂಟಲ್ ಕಾಲೇಜುಗಳೂ ಇವೆ.

ಎಂಇಎಸ್‍ನ ಈ ನಿರ್ಧಾರಕ್ಕೆ ಕೇರಳದಲ್ಲಿ ಕೆಲವೆಡೆ ಆಕ್ಷೇಪಗಳೂ ವ್ಯಕ್ತವಾಗಿವೆ. ಬುರ್ಖಾದಂಥ ಧಾರ್ಮಿಕ ವಿಚಾರದ ಬಗ್ಗೆ ಅವರು ತಳೆದಿರುವ ನಿಲುವು ಸರಿಯಲ್ಲ. ಧಾರ್ಮಿಕ ವಿಷಯಗಳನ್ನ ಎಂಇಎಸ್ ನಿರ್ಧರಿಸುವಂತಿಲ್ಲ ಎಂದು ಸಮಸ್ತ ಕೇರಳ ಜಾಮಿಯ್ಯತುಲ್ ಉಲಾಮಾ ಸಂಘಟನೆಯ ಅಧ್ಯಕ್ಷ ಸಯ್ಯಿದ್ ಮುಹಮ್ಮದ್ ಜಿಫ್ರಿ ಮುತುಕ್ಕೋಯಾ ತಾಂಗಲ್ ಅವರು ಹೇಳಿದ್ದಾರೆ.

ಭಾರತದಲ್ಲಿ ಶಿವಸೇನಾದಂಥ ಸಂಘಟನೆಗಳು ಬುರ್ಖಾ ನಿಷೇಧಕ್ಕೆ ಒತ್ತಾಯ ಮಾಡುತ್ತಿವೆ.